ಭಾನುವಾರ, ಜೂನ್ 20, 2021
24 °C

ಕ್ರೀಡಾ ಪ್ರಶಸ್ತಿ ವಿಜೇತರ ಆಯ್ಕೆಗೆ 17ರಂದು ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಆಯ್ಕೆಯಾಗಿ ಆಗಸ್ಟ್‌ 17 ಹಾಗೂ 18ರಂದು ಸಭೆಯು ನಡೆಯಲಿದೆ. ಕ್ರೀಡಾ ಸಚಿವಾಲಯವು ರಚಿಸಿರುವ 12 ಜನರ ಆಯ್ಕೆ ಸಮಿತಿಯು ವಿಜೇತರನ್ನು ನಿರ್ಧರಿಸಲಿದೆ. ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಮುಖ್ಯ ಕಚೇರಿಯಲ್ಲಿ ಸಭೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮಾ ಅವರ ನೇತೃತ್ವದ ಸಮಿತಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮತ್ತು ಹಾಕಿ ದಿಗ್ಗಜ ಸರ್ದಾರ್ ಸಿಂಗ್, ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿರುವ ದೀಪಾ ಮಲಿಕ್ ಇದ್ದಾರೆ. ಟೇಬಲ್ ಟೆನಿಸ್ ಮಾಜಿ ಆಟಗಾರ್ತಿ ಮೊನಾಲಿಸಾ ಬರುವಾ ಮೆಹ್ತಾ, ಬಾಕ್ಸರ್‌ ವೆಂಕಟೇಶನ್ ದೇವರಾಜನ್ ಹಾಗೂ ಕ್ರೀಡಾ ಪತ್ರಕರ್ತ ಆಲೋಕ್ ಸಿನ್ಹಾ ಅವರೂ ಸಮಿತಿಯಲ್ಲಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್, ಜಂಟಿ ಕಾರ್ಯದರ್ಶಿ ಎಲ್‌.ಎಸ್‌.ಸಿಂಗ್ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ರಾಜಗೋಪಾಲನ್ ಕೂಡ ಇದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡವರ ಪರಿಗಣನೆಗಾಗಿ ಈ ಹಿಂದೆ ಆ ಪ್ರಶಸ್ತಿ ವಿಜೇತ ಇಬ್ಬರು ಸದಸ್ಯರನ್ನು ಅಧ್ಯಕ್ಷರು ಸಭೆಗೆ ಆಹ್ವಾನಿಸಬಹುದು.

‘ಆಗಸ್ಟ್‌ 17 ಹಾಗೂ 18ರಂದು ಸಭೆ ನಡೆಯಲಿದೆ. ಆಗಸ್ಟ್‌ 29ರಂದು ಪ್ರಶಸ್ತಿ ಪ್ರದಾನ ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಈ ವರ್ಷದ ಪ್ರಶಸ್ತಿ ವಿಜೇತರನ್ನಂತೂ ಪ್ರಕಟಿಸಲಾಗುತ್ತದೆ’ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಬಾರಿಯೂ ಒಂದೇ ಸಮಿತಿಯ ಮೂಲಕ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು