ಮಂಗಳವಾರ, ಅಕ್ಟೋಬರ್ 20, 2020
25 °C

ಸಾಯ್‌ಗೆ ಹೊಸ ಲಾಂಛನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದ ನೂತನ ಲಾಂಛನವನ್ನು ಬುಧವಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅನಾವರಣಗೊಳಿಸಿದರು.

1982ರ ನಂತರ ಇದೇ ಮೊದಲ ಬಾರಿಗೆ ಲಾಂಛನವನ್ನು ಬದಲಾವಣೆ ಮಾಡಲಾಗಿದೆ. ಹೊಸ ಲಾಂಛನದಲ್ಲಿ ಎಸ್‌.ಎ.ಐ ಇಂಗ್ಲಿಷ್ ಅಕ್ಷರಗಳು ದೊಡ್ಡದಾಗಿ ಕಾಣುತ್ತವೆ. ಅದರ ಮೇಲೊಂದು ಅಥ್ಲೀಟ್ ವಿಮಾನದ ಚಿತ್ರವಿದೆ. ಇದು ಎತ್ತರದ ಸಾಧನೆಯತ್ತ ಚಲಿಸುತ್ತಿರುವ ದ್ಯೋತಕವಾಗಿದೆ.

ನವದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಲಾಂಛನ ಅನಾವರಣ ನಡೆಯಿತು.

‘ನೂತನ ಲೊಗೊ ಪುಟ್ಟದಾಗಿದೆ. ಆದರೆ ಅದು ನೀಡುತ್ತಿರುವ ಸಂದೇಶವು ಬಹಳ ದೊಡ್ಡದು. ಹಳೆಯ ಲೋಗೊಗಿಂತ ಆಕರ್ಷಕವಾಗಿದೆ’ ಎಂದು ಸಚಿವ ರಿಜಿಜು ಹೇಳಿದರು.

ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಸಾಯ್ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಭಾತ್ರಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು