ಮಂಗಳವಾರ, ನವೆಂಬರ್ 29, 2022
29 °C

ಸೆಪಕ್‌ ಟಕ್ರಾ: ದೆಹಲಿ, ಕೇರಳ ತಂಡಗಳಿಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ದೆಹಲಿ ಹಾಗೂ ಕೇರಳ ತಂಡಗಳು ಚಂದರಗಿಯ ಎಸ್‌.ಎಂ. ಕಲೂತಿ ಕ್ರೀಡಾ ವಸತಿ ಶಾಲೆಯಲ್ಲಿ ನಡೆದ ಸೆಪಕ್‌ ಟಕ್ರಾ ಸಬ್‌ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ, ಕ್ರಮವಾಗಿ ಬಾಲಕ ಹಾಗೂ ಬಾಲಕರ ರೆಗೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವು.

ಶುಕ್ರವಾರ ನಡೆದ ಐದನೇ ದಿನದಾಟದಲ್ಲಿ ದೆಹಲಿ ಬಾಲಕರ ತಂಡವು ಮಣಿಪುರ ತಂಡವನ್ನು 17–21, 22–20, 21–13 ಅಂಕಗಳಿಂದ ಸೋಲಿಸಿತು. ಸೆಮಿಫೈನಲ್‌ ಪಂದ್ಯದಲ್ಲಿ ದೆಹಲಿ ತಂಡದ ಆಟಗಾರರು ನಾಗಾಲ್ಯಾಂಡ್‌ ವಿರುದ್ಧ ಹಾಗೂ ಮಣಿಪುರ ತಂಡದವರು ಬಿಹಾರ ವಿರುದ್ಧ ಜಯ ಸಾಧಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ಕೇರಳ ತಂಡವು 21-11, 21-16 ಅಂಕಗಳಿಂದ ಗುಜರಾತನ್ನು ಮಣಿಸಿ ಬಂಗಾರ ಗೆದ್ದಿತು. ಸೆಮಿಪೈನಲ್‌ ಪಂದ್ಯದಲ್ಲಿ ಕೇರಳ ಬಾಲಕಿಯರು ಮಣಿಪುರ ವಿರುದ್ಧ ಹಾಗೂ ಗುಜರಾತ್‌ ತಂಡದವರು ಹರ್ಯಾಣದ ವಿರುದ್ಧ ಗೆದ್ದಿದ್ದರು.

ಸಮಾರೋಪ: ಐದು ದಿನಗಳಿಂದ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ 29 ರಾಜ್ಯಗಳಿಂದ 600 ಕ್ರೀಡಾಪಟುಗಳು ಹಾಗೂ 50 ಜನ ತರಬೇತುದಾರು, ನಿರ್ಣಾಯಕರು ಪಾಲ್ಗೊಂಡರು.

ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪೋಕೋ ಸಂಸ್ಥೆಯ ನಿರ್ದೇಶಕರಾದ ಎಸ್.ಆರ್.ನವರಕ್ಕಿ, ಎಂ.ಎಸ್‌.ಮನೋಳಿ, ಎಸ್‌.ಬಿ. ಯರಗಣವಿ, ಮಾಜಿ ಅಂತರರಾಷ್ಟ್ರೀಯ ಸೆಪೆಕ್ ಟಕ್ರಾ ಆಟಗಾರ ಮಂಜುನಾಥ್ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು