ಭಾನುವಾರ, ಮಾರ್ಚ್ 7, 2021
27 °C
ರಾಜ್ಯ ಯೂತ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ತೆರೆ

ಯೂತ್‌ ಅಥ್ಲೆಟಿಕ್ಸ್‌: ಶಶಿಕಾಂತ್‌, ನೀತಾ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನ ವಿ.ಎ.ಶಶಿಕಾಂತ್‌ ಮತ್ತು ಮೈಸೂರಿನ ಪಿ.ಕೆ.ನೀತಾ ಅವರು ಭಾನುವಾರ ಕೊನೆಗೊಂಡ ರಾಜ್ಯ ಯೂತ್‌ (18 ವರ್ಷ ವಯಸ್ಸಿನೊಳಗಿನವರು) ಅಥ್ಲೆಟಿಕ್ಸ್‌ನಲ್ಲಿ ‘ವೇಗಿಗಳು’ ಗೌರವಕ್ಕೆ ಪಾತ್ರರಾದರು.

ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೂಟದ ಬಾಲಕರ 100 ಮೀ. ಓಟದಲ್ಲಿ ಶಶಿಕಾಂತ್‌ 10.70 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಹಾದಿಯಲ್ಲಿ ಅವರು ಇರ್ಫಾನ್‌ ಶೇಖ್ (2011 ರಲ್ಲಿ) ಮತ್ತು ಮೊಹಮ್ಮದ್‌ ಸಾದತ್‌ (2014 ರಲ್ಲಿ) ಅವರ ಹೆಸರಿನಲ್ಲಿದ್ದ ರಾಜ್ಯ ದಾಖಲೆಯನ್ನು ಸರಿಗಟ್ಟಿದರು.

ಫಲಿತಾಂಶ: ಬಾಲಕರ ವಿಭಾಗ: 100 ಮೀ. ಓಟ: ವಿ.ಎ.ಶಶಿಕಾಂತ್ (ಬೆಂಗಳೂರು ಉತ್ತರ)–1, ಮಲಿಕ್‌ ರಿಹಾನ್ (ಬೆಂಗ ಳೂರು)–2, ಕೆ.ಪಿ.ಶರಣ್‌ದೀಪ್ (ಬೆಂಗ ಳೂರು ಉತ್ತರ)–3. ಕಾಲ: 10.70 ಸೆ. 400 ಮೀ. ಓಟ: ಮಹಾಂತೇಶ್ (ಆಳ್ವಾಸ್‌)–1, ಅರ್ಹಮ್‌ ಲುನಿಯಾ (ಅರ್ಜುನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌)–2, ದೀಪಕ್‌ ಯಾದವ್ (ಮೈಸೂರು)–3. ಕಾಲ: 49.60 ಸೆ. 400 ಮೀ. ಹರ್ಡಲ್ಸ್: ಶರೊನ್‌ ಪೀಟರ್‌ (ಮೈಸೂರು)–1, ಎಂ.ನರಸಿಂಹ (ಬಳ್ಳಾರಿ)–2, ಶಾನ ವಾಜ್ (ಬೆಂಗಳೂರು ಉತ್ತರ)–3. ಕಾಲ: 1 ನಿ.01.20 ಸೆ. 110 ಮೀ. ಹರ್ಡಲ್ಸ್‌: ದಿಶಾಂತ್‌ ನಾಯ್ಕ್ (ಆಳ್ವಾಸ್)–1, ಎಂ.ಕೃಷಿಕ್ (ತುಮಕೂರು)–2, ಶರೋನ್‌ ಪೀಟರ್ (ಮೈಸೂರು)–3. ಕಾಲ: 15.40 ಸೆ. 1,500 ಮೀ. ಓಟ: ಸಂಗಮೇಶ್ (ಬೆಂಗಳೂರು ಉತ್ತರ)–1, ಎಂ.ಎಂ.ಸತೀಶ್ (ಆಳ್ವಾಸ್)–2, ತುಷಾರ್‌ ಬಿ (ಬೆಳಗಾವಿ)–3. ಕಾಲ: 4 ನಿ.18.70 ಸೆ. ಟ್ರಿಪಲ್‌ ಜಂಪ್: ಎಂ.ಲೋಕೇಶ್ (ಡಿವೈ ಇಎಸ್‌, ಬೆಂಗಳೂರು)–1, ರೋಹಿತ್ (ಆಳ್ವಾಸ್)–2, ಜಫರ್‌ ಸರ್ವಾರ್ (ಬೆಳ ಗಾವಿ)–3. ದೂರ: 13.66 ಮೀ.

ಜಾವೆಲಿನ್‌ ಥ್ರೋ: ಕಿರಣ್‌ ನಾಗೇಗೌಡ (ಆಳ್ವಾಸ್)–1, ಎಂ.ಲೋಕೇಶ್ (ಡಿವೈ ಇಎಸ್‌ ಬೆಂಗಳೂರು)–2, ಓಂಕಾರ್‌ ಬಿ (ಬೆಳಗಾವಿ)–3. ದೂರ: 24.62 ಮೀ.

ಲಾಂಗ್‌ಜಂಪ್: ಎಂ.ಲೋಕೇಶ್ (ಡಿವೈಇಎಸ್‌, ಬೆಂಗಳೂರು)–1, ಮೊಹ ಮ್ಮದ್ ಯಾಸೀನ್ (ಅರ್ಜುನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌)–2, ಅಮೋಘ್‌ ಗೌಡ (ಬೆಂಗಳೂರು ನಗರ)–3. ದೂರ: 6.50 ಮೀ. ಡಿಸ್ಕಸ್‌ ಥ್ರೋ: ನಾಗೇಂದ್ರ ಅಣ್ಣಪ್ಪ ನಾಯ್ಕ್ (ಆಳ್ವಾಸ್‌)–1, ಮೋಹಿತ್‌ ಎನ್‌.ರೈ (ಮೈಸೂರು)–2, ಕಾರ್ತಿಕ್ (ಬೆಂಗಳೂರು ಉತ್ತರ)–3. ದೂರ: 51.98 ಮೀ. ಶಾಟ್‌ಪಟ್‌: ನಾಗೇಂದ್ರ ಅಣ್ಣಪ್ಪ ನಾಯ್ಕ್ (ಆಳ್ವಾಸ್‌)–1, ಕಾರ್ತಿಕ್‌ (ಬೆಂಗಳೂರು ಉತ್ತರ)–2, ರಾಕೇಶ್‌ ಜಾಧವ್ (ಕಲಬುರ್ಗಿ)–3. ದೂರ: 16.85 ಮೀ. 2000 ಮೀ. ಸ್ಟೀಪಲ್‌ಚೇಸ್: ಸಂಗಮೇಶ್ (ಡಿವೈ ಇಎಸ್‌, ಬೆಂಗಳೂರು)–1, ಶಿವಾಜಿ ಕೃಷ್ಣೋಜಿ ಜಾಧವ್ (ಧಾರವಾಡ)–2, ಡಿ.ಸಿ.ಈಶ್ವರ್‌ (ಧಾರವಾಡ)–3 ಕಾಲ: 6 ನಿ.42.90 ಸೆ.

ಬಾಲಕಿಯರ ವಿಭಾಗ: 100 ಮೀ. ಓಟ: ಪಿ.ಕೆ.ನೀತಾ (ಮೈಸೂರು)–1, ಆರ್‌.ಮೋನಿಕಾ (ಡಿವೈಇಎಸ್‌, ಬೆಂಗಳೂರು)–2, ಸಂಜನಾ ಆನಂದ್‌ (ಧಾರವಾಡ)–3. ಕಾಲ: 13.00 ಸೆ. 400 ಮೀ. ಓಟ: ಪ್ರಿಯಾ ಮೋಹನ್ (ಅರ್ಜುನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌, ಬೆಂಗಳೂರು)–1, ಕೀರ್ತನಾ (ಉಡುಪಿ)–2, ಶ್ರಾವಣಿ ಭಾಟೆ (ಬೆಳಗಾವಿ)–3. ಕಾಲ: 57.10 ಸೆ. 2000 ಮೀ. ಸ್ಟೀಪಲ್‌ ಚೇಸ್: ಪಿ.ಚೈತ್ರಾ (ಆಳ್ವಾಸ್‌)–1, ಎನ್‌.ಶ್ರಾವಣಿ (ಮೈಸೂರು)–2, ಸಿ.ವಿ.ರಮ್ಯಾ (ಮೈಸೂರು)–3. ಕಾಲ: 8 ನಿ. 0.80 ಸೆ.

1,500 ಮೀ. ಓಟ: ಪಿ.ಚೈತ್ರಾ (ಆಳ್ವಾಸ್‌)–1, ಶ್ರುತಿ ನಾರಾಯಣ್ (ಬೆಳಗಾವಿ)–2, ಸಿ.ಪುಷ್ಪಾ (ಮೈಸೂರು)–3. ಕಾಲ: 5 ನಿ.23.10 ಸೆ. ಲಾಂಗ್‌ಜಂಪ್: ಝೀನತ್ (ಡಿವೈಇಎಸ್, ಬೆಂಗಳೂರು)–1, ಮಂಜುಳಾ ರಂಗಪ್ಪ (ಡಿವೈಇಎಸ್‌, ಕೊಪ್ಪಳ)–2, ಎಚ್‌.ಕೆ.ಸಂಧ್ಯಾ (ಮೈಸೂರು)–3. ದೂರ: 4.70 ಮೀ. ಶಾಟ್‌ಪಟ್‌: ನಿಶೆಲ್ ಡೆಲ್ಫಿನಾ ಡಿಸೋಜಾ (ದಕ್ಷಿಣ ಕನ್ನಡ)–1, ವಿಜಯಲಕ್ಷ್ಮಿ (ದಕ್ಷಿಣ ಕನ್ನಡ)–2, ಜಿ.ಕೆ.ಸೋನಿಕಾ (ಮೈಸೂರು)–3. ದೂರ: 11.17 ಮೀ. ಹೈಜಂಪ್: ಪಲ್ಲವಿ (ಆಳ್ವಾಸ್)–1, ಎಂ.ಎಸ್‌.ಸಿಂಚನಾ (ಆಳ್ವಾಸ್‌)–2, ಎನ್‌.ಎನ್‌.ಜ್ಞಾನಶ್ರೀ (ಬೆಂಗಳೂರು)–3. ಎತ್ತರ: 1.54 ಮೀ. 5000 ಮೀ. ನಡಿಗೆ: ಧನುಷಾ ಶೆಟ್ಟಿ (ದಕ್ಷಿಣ ಕನ್ನಡ)–1, ಡಿ.ಸಿ.ಚಂದನಾ (ಕೊಡಗು)–2 ಕಾಲ: 30 ನಿ.36.30 ಸೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು