ಶನಿವಾರ, ಡಿಸೆಂಬರ್ 7, 2019
21 °C

ಟೇಬಲ್ ಟೆನಿಸ್‌ ಟೂರ್ನಿ: ಆಕಾಶ್‌, ಸಹನಾಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಆಕಾಶ್‌ ಕೆ.ಜೆ. ಹಾಗೂ ಸಹನಾ ಎಚ್‌. ಮೂರ್ತಿ ಅವರು ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ಸಬ್‌ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಆಕಾಶ್‌ ಕೆ.ಜೆ., ಫೈನಲ್‌ ಪಂದ್ಯದಲ್ಲಿ ಸುಜನ್‌ ಆರ್‌. ಭಾರಧ್ವಾಜ್‌ ಅವರನ್ನು 11–8, 11–6, 11–5ರಿಂದ ಸೋಲಿಸಿದರು. ಸೆಮಿಫೈನಲ್‌ ಹಣಾಹಣಿಯಲ್ಲಿ ಆಕಾಶ್‌ ಅವರು ಸಮ್ಯಕ್‌ ಕಶ್ಯಪ್‌ ಎದುರು 10–12, 11–8, 11–9, 11–7ರಿಂದ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಹನಾ , ತೃ‍ಪ್ತಿ ಪುರೋಹಿತ್‌ ಅವರನ್ನು 9–11, 11–7, 11–9, 11–9ರಿಂದ ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಸಹನಾ ಅವರು ರೈನಾ ನಾರಾ ಅವರನ್ನು 11–6, 11–2, 11–2ರಿಂದ ಸೋಲಿಸಿ ಫೈನಲ್‌ಗೆ ಕಾಲಿಟ್ಟಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು