ಕ್ವಾರ್ಟರ್ ಫೈನಲ್‌ಗೆ ಶ್ರೇಯಾಂಸಿ

7
ರಾಜ್ಯ ರ‍್ಯಾಂಕಿಂಗ್‌ ಸೀನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ

ಕ್ವಾರ್ಟರ್ ಫೈನಲ್‌ಗೆ ಶ್ರೇಯಾಂಸಿ

Published:
Updated:

ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ ಶ್ರೇಯಾಂಸಿ ಪರದೇಶಿ  ಅವರು ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮಧ್ಯಪ್ರದೇಶದ ಶ್ರೇಯಾಂಸಿ 21–13, 21–17ರಲ್ಲಿ ರೇಷ್ಮಾ ಕಾರ್ತಿಕ್‌ ಅವರನ್ನು ಸೋಲಿಸಿದರು.

ಭಾರತ ಬ್ಯಾಡ್ಮಿಂಟನ್‌ ತಂಡದ ಕೋಚ್ ಪುಲ್ಲೇಲಾ ಗೋಪಿಚಂದ್‌ ಅವರ ಮಗಳು ಗಾಯತ್ರಿ ಗೋಪಿಚಂದ್‌ ಪುಲ್ಲೇಲಾ ಕೂಡಾ ಎಂಟರ ಘಟ್ಟ ಪ್ರವೇಶಿಸಿದರು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ತೆಲಂಗಾಣದ ಗಾಯತ್ರಿ 21–17, 21–15ರಲ್ಲಿ ಹರಿಯಾಣದ ಇರಾ ಶರ್ಮಾ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಆಕರ್ಷಿ ಕಶ್ಯಪ್‌ 23–21, 21–17ರಲ್ಲಿ ರಿತುಪರ್ಣ ದಾಸ್‌ ಎದುರೂ, ಅನುರಾ ಪ್ರಭದೇಸಾಯಿ 21–19, 12–21, 21–15ರಲ್ಲಿ ವೈದೇಹಿ ಚೌಧರಿ ಮೇಲೂ, ಮನೀಷಾ ರಾಣಿ 21–16, 21–18ರಲ್ಲಿ ಅನಿತಾ ಒಹ್ಲಾನ್‌ ವಿರುದ್ಧವೂ, ಜಿ.ವೃಷಾಲಿ 20–22, 21–8, 21–15ರಲ್ಲಿ ಸಮಿಯಾ ಇಮಾದ್‌ ಫಾರೂಕಿ ಎದುರೂ, ಅಸ್ಮಿತಾ ಚಾಹಿಲಾ 21–12, 21–10ರಲ್ಲಿ ಪ್ರಿನ್ಸಿ ದಾಸ್‌ ಮೇಲೂ, ಭವ್ಯ ರಿಷಿ 21–18, 17–21, 21–19ರಲ್ಲಿ ಕನಿಕಾ ಕನ್ವಾಲ್‌ ವಿರುದ್ಧವೂ ವಿಜಯಿಯಾದರು.

ಅಭಿಷೇಕ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಕರ್ನಾಟಕದ ಅಭಿಷೇಕ್‌ ಎಲಿಗಾರ್, ಹದಿನಾರರ ಘಟ್ಟದಲ್ಲಿ ಎಡವಿದರು.

ಲಕ್ಷ್ಯ ಸೇನ್‌ 21–19, 21–13ರಲ್ಲಿ ಅಭಿಷೇಕ್‌ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಅಮನ್‌ ಕುಮಾರ್‌ 21–14, 21–10ರಲ್ಲಿ ಆಕಾಶ್‌ ಚೌಹಾಣ್‌ ಎದುರೂ, ಸಿದ್ದಾರ್ಥ್‌ ಠಾಕೂರ್‌ 21–13, 21–15ರಲ್ಲಿ ಬಾಲರಾಜ್‌ ಕಾಜ್ಲಾ ಮೇಲೂ, ಚಿರಾಗ್‌ ಸೇನ್‌ 21–18, 6–21, 21–8ರಲ್ಲಿ ಕೆ.ಜಗದೀಶ್‌ ವಿರುದ್ಧವೂ, ಆಲಾಪ್‌ ಮಿಶ್ರಾ 21–18, 21–12ರಲ್ಲಿ ಯಶ್‌ ಯೋಗಿ ಮೇಲೂ, ಕಿರಣ್ ಜಾರ್ಜ್‌ 21–16, 21–8ರಲ್ಲಿ ಬಿ.ಎಂ.ರಾಹುಲ್‌ ಭಾರದ್ವಾಜ್‌ ಎದುರೂ, ಆರ್ಯಮನ್‌ ಟಂಡನ್‌ 21–14, 16–21, 21–11ರಲ್ಲಿ ರೋಹಿತ್‌ ಯಾದವ್‌ ಮೇಲೂ, ಸಿದ್ದಾರ್ಥ್‌ ಪ್ರತಾಪ್‌ ಸಿಂಗ್‌ 21–11, 21–16ರಲ್ಲಿ ಸಿದ್ದಾರ್ಥ್‌ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !