ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಈಜು: ಬಿಎಸಿಗೆ ಚಾಂಪಿಯನ್ ಪಟ್ಟ

ರಾಷ್ಟ್ರೀಯ ದಾಖಲೆ ಮುರಿದ ಶ್ರೀಹರಿ ನಟರಾಜ್, ಸುವನಾಗೆ ದಾಖಲೆ
Last Updated 1 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ದಿನದಿಂದಲೇ ಆಧಿಪತ್ಯ ಸ್ಥಾಪಿಸಿದ ಬಸವನಗುಡಿ ಈಜುಕೇಂದ್ರ (ಬಿಎಸಿ) ಗುರುವಾರ ಮುಕ್ತಾಯಗೊಂಡ ರಾಜ್ಯ ಈಜು ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬೆಂಗಳೂರು ಈಜು ಸಂಶೋಧನಾ ಕೇಂದ್ರ (ಬಿಎಸ್‌ಆರ್‌ಸಿ) ರನ್ನರ್ ಅಪ್ ಆಯಿತು.

ಕೊನೆಯ ದಿನ ಎರಡು ವೈಯಕ್ತಿಕ ದಾಖಲೆಗಳು ಸೇರಿದಂತೆ ಒಟ್ಟು ನಾಲ್ಕು ದಾಖಲೆಗಳು ಮುರಿದವು. 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಿಎಸ್ಆರ್‌ಸಿಯ ಶ್ರೀಹರಿ ನಟರಾಜ್ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಕಳೆದ ವರ್ಷ 26.18 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಅವರು ದಾಖಲೆ ಬರೆದಿದ್ದರು. ಗುರುವಾರ 25.63 ಸೆಕೆಂಡುಗಳ ಸಾಧನೆ ಮಾಡಿದರು. ಈ ವಿಭಾಗದಲ್ಲಿದ್ದ ಕೂಟ ದಾಖಲೆಯನ್ನೂ ಅವರು ಮುರಿದರು. 2016ರಲ್ಲಿ ಅರವಿಂದ 27.23 ಸೆಕೆಂಡುಗಳ ಸಾಧನೆಯೊಂದಿಗೆ ದಾಖಲೆ ಮಾಡಿದ್ದರು.

ಮಹಿಳೆಯರ 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನ ಸುವನಾ ಭಾಸ್ಕರ್ ಕೂಟ ದಾಖಲೆ ಮಾಡಿದರು. 30.89 ಸೆಕೆಂಡುಗಳಲ್ಲಿ ‘ದಡ’ ಸೇರಿದ ಸುವನಾ 2005ರಲ್ಲಿ ಶಿಖಾ ಟಂಡನ್ (31.13 ಸೆಕೆಂಡು) ನಿರ್ಮಿಸಿದ ದಾಖಲೆಯನ್ನು ಹಿಂದಿಕ್ಕಿದರು.

ಪುರುಷರ ಮತ್ತು ಮಹಿಳೆಯರ 4x100 ಮೆಡ್ಲೆಗಳಲ್ಲೂ ಕೊನೆಯ ದಿನ ದಾಖಲೆಗಳಾದವು. ಪುರುಷರ ವಿಭಾಗದಲ್ಲಿ 2017ರಲ್ಲಿ ಗ್ಲೋಬಲ್ ಈಜು ಕೇಂದ್ರ (4:01.51 ನಿ) ನಿರ್ಮಿಸಿದ್ದ ದಾಖಲೆಯನ್ನು ಬಿಎಸ್‌ಆರ್‌ಸಿ (4:00.50) ಮುರಿಯಿತು. ಮಹಿಳೆಯರ ವಿಭಾಗದಲ್ಲಿ ಬಿಎಸಿ (2018ರಲ್ಲಿ; 4:42.92 ನಿ) ಹೆಸರಿನಲ್ಲಿದ್ದ ದಾಖಲೆಯನ್ನು ಅದೇ ತಂಡ (4:36.78 ನಿ) ಉತ್ತಮಪಡಿಸಿಕೊಂಡಿತು.

ಕೊನೆಯ ದಿನದ ಫಲಿತಾಂಶಗಳು: ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್–1. ಕಾಲ: 25.63 ಸೆ (ರಾಷ್ಟ್ರೀಯ ದಾಖಲೆ), ರಕ್ಷಿತ್ ಯು.ಶೆಟ್ಟಿ–2, ಪೂರ್ವಾಂಕ್ ರಮೇಶ್–3 (ಮೂವರೂ ಬಿಎಸ್‌ಆರ್‌ಸಿ); 200 ಮೀ ಬಟರ್‌ಫ್ಲೈ: ತನಿಶ್ ಜಾರ್ಜ್ ಮ್ಯಾಥ್ಯೂ (ಬಿಎಸ್‌ಆರ್‌ಸಿ)–1. ಕಾಲ: 2:09.11 ನಿ, ಸೈಫ್ ಚಂದ್ರನ್‌ (ಗಫ್ರೆ ಎಸ್‌ಪಿ)–2, ಉತ್ಕರ್ಷ್ ಪಾಟೀಲ್ (ಬಿಎಸಿ)–3; ಪುರುಷರ 400 ಮೀ ಫ್ರೀಸ್ಟೈಲ್‌: ಅನೀಶ್ ಎಸ್‌.ಗೌಡ (ಪೂಜಾ ಈಜು ಕೇಂದ್ರ)–1. ಕಾಲ: 4:16.13 ನಿಮಿಷ, ಮ್ಯಾಥ್ಯೂ ಕೋಶಿ–2, ಕೌಸ್ತುಭ್ ಅಗರವಾಲ್–3 (ಇಬ್ಬರೂ ಬಿಎಸಿ); 4x400 ಮೀ ಮೆಡ್ಲೆ: ಬಿಎಸ್ಆರ್‌ಸಿ (ರಕ್ಷಿತ್‌, ಶ್ರೀಹರಿ, ಮಾನವ್ ದಿಲೀಪ್, ತನಿಶ್‌)–1. ಕಾಲ: 4:00.80 (ಕೂಟ ದಾಖಲೆ) ನಿ, ಬಿಎಸಿ ‘ಎ’ (ಶಿವಾಂಶ್ ಸಿಂಗ್‌, ಕರಣ್ ರಾಜು, ಪೃಥ್ವಿಕ್ ದಾಸ್‌, ಪೃಥ್ವಿ)–2, ಬಿಎಸ್‌ಆರ್‌ಸಿ (ಪುರ್ವಾಂಕ್, ಜತಿನ್ ಬಿ, ಅನೀಶ್ ರೇ, ಸಂಭವ್‌)–3.

ಮಹಿಳೆಯರ 50 ಮೀ ಬ್ಯಾಕ್‌ಸ್ಟ್ರೋಕ್‌: ಸುವನಾ ಸಿ.ಭಾಸ್ಕರ್ (ಡಾಲ್ಫಿನ್‌ ಅಕ್ವಾಟಿಕ್ಸ್‌)–1. ಕಾಲ: 30.89 ಸೆ (ಕೂಟ ದಾಖಲೆ), ರಿಧಿಮಾ ವಿ.ಕುಮಾರ್ (ಬಿಎಸಿ)–2, ನೀನಾ ವೆಂಕಟೇಶ್ (ಡಾಲ್ಫಿನ್ ಅಕ್ವಾಟಿಕ್ಸ್)–3; 200 ಮೀ ಬಟರ್‌ಫ್ಲೈ: ಆವೇಶ ಗಿರೀಶ್‌ (ವಿಜಯನಗರ ಈಜುಕೇಂದ್ರ)–1. ಕಾಲ: 2:28.02 ನಿ, ಸಾಚಿ ಜಿ–2, ದಾಮಿನಿ ಗೌಡ–3 (ಇಬ್ಬರೂ ಬಿಎಸಿ); 400 ಮೀ ಫ್ರೀಸ್ಟೈಲ್‌: ಖುಷಿ ದಿನೇಶ್ (ಬಿಎಸಿ)–1. ಕಾಲ: 4:47.09 ನಿ, ದಿವ್ಯಾ ಘೋಷ್ (ಬಿಎಸ್ಆರ್‌ಸಿ)–2, ಅಸ್ಮಿತಾ ಚಂದ್ರ (ಗಫ್ರೆ ಎಸ್‌ಪಿ)–3;4x400 ಮೀ ಮೆಡ್ಲೆ: ಬಿಎಸಿ ‘ಎ’ (ರಿಧಿಮಾ, ಮಾಳವಿಕಾ, ಸಲೋನಿ ದಲಾಲ್, ಖುಷಿ ದಿನೇಶ್)–1. ಕಾಲ: 4:36.78 (ಕೂಟ ದಾಖಲೆ), ಡಾಲ್ಫಿನ್ ಅಕ್ವಾಟಿಕ್ಸ್ (ಸುವನಾ, ನೀನಾ ವೆಂಕಟೇಶ್‌, ಆರುಷಿ ಮಂಜುನಾಥ್‌, ಅನ್ವಯಿ ಮಸ್ಕೆ)–2, ಬಿಎಸ್‌ಆರ್‌ಸಿ (ಭೂಮಿಕಾ ಕೇಸರಕರ್, ಸ್ಮೃತಿ ಮಹಾಲಿಂಗಂ, ಸಾನ್ವಿ ರಾವ್, ದೀಕ್ಷಾ ರಮೇಶ್‌)–3.

ಶ್ರೀಹರಿ, ಸುವನಾ ಉತ್ತಮ ಈಜುಪಟುಗಳು
ಪುರುಷರ ವಿಭಾಗದಲ್ಲಿ ಬಿಎಸ್‌ಆರ್‌ಸಿಯ ಶ್ರೀಹರಿ ನಟರಾಜ್ ಹಾಗೂ ಮಹಿಳೆಯರ ವಿಭಾಗದಲ್ಲಿ ಡಾಲ್ಫಿನ್‌ ಕ್ಲಬ್‌ನ ಸುವನಾ ಸಿ.ಭಾಸ್ಕರ್‌ ಉತ್ತಮ ಈಜುಗಾರರು ಎನಿಸಿಕೊಂಡರು. ಶ್ರೀಹರಿ 1133 ಪಾಯಿಂಟ್ ಗಳಿಸಿದರೆ ಸುವನಾ 126 ಪಾಯಿಂಟ್ ಕಲೆ ಹಾಕಿದರು. ವಾಟರ್ ಪೋಲೊದಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಬಿಎಸಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಎನ್‌ಎಸಿ ಎರಡೂ ವಿಭಾಗಗಳಲ್ಲಿ ರನ್ನರ್ ಅಪ್ ಆಯಿತು.

ಮೊದಲ ಐದು ಸ್ಥಾನ
ತಂಡ;ಪಾಯಿಂಟ್‌
ಬಿಎಸಿ; 374
ಬಿಎಸ್‌ಆರ್‌ಸಿ; 270
ಪೂಜಾ ಅಕ್ವಾಟಿಕ್ಸ್; 89
ಡಾಲ್ಫಿನ್ ಅಕ್ವಾಟಿಕ್ಸ್; 85
ಜಿಎಸ್‌ಪಿ; 54

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT