7

ಈಜು: ಶ್ರೀಹರಿ ನಟರಾಜ್‌ಗೆ ಚಿನ್ನ

Published:
Updated:

ಪುಣೆ: ಕರ್ನಾಟಕದ ಶ್ರೀಹರಿ ನಟರಾಜ್ ಇಲ್ಲಿ ನಡೆಯುತ್ತಿರುವ  ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು.

ಬುಧವಾರ ನಡೆದ ಬಾಲಕರ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್ ಅವರು 2 ನಿಮಿಷ, 03.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರು.

ಬಾಲಕರ 4X50 ಮೀಟರ್ಸ್‌ ಫ್ರೀಸ್ಠೈಲ್‌ನಲ್ಲಿಯೂ ಕರ್ನಾಟಕ ತಂಡವು ಚಿನ್ನದ ಪದಕ ಕೊರಳಿಗೇರಿಸಿಕೊಂಡಿತು.

ಕರ್ನಾಟಕ ಸ್ಪರ್ಧಿಗಳ ಫಲಿತಾಂಶ

ಬಾಲಕರು: 4X50 ಮೀ ಫ್ರೀಸ್ಟೈಲ್: ಕರ್ನಾಟಕ (ರೇಣುಕಾಚಾರ್ಯ, ತನಯ್ ಸುರೇಶ್, ಶಾರ್ವಿ ಲೋಕೇಶ್ ರೆಡ್ಡಿ, ನವನೀತ್ ಗೌಡ) –1, ಕಾಲ: 2ನಿ,06.11ಸೆ.

200 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ –1 (2ನಿ,03.17ಸೆ). 200 ಮೀ ಮೆಡ್ಲೆ: ವಿದಿತ್ ಶಂಕರ್ –1 (2ನಿ,27.67ಸೆ)

1500 ಮೀ ಫ್ರೀಸ್ಟೈಲ್: ಕಪಿಲ್ ಡಿ ಶೆಟ್ಟಿ –2 (ಕಾಲ: 17ನಿ,02.31ಸೆ),

ಮಹಿಳೆಯರು: 200 ಮೀ ಬಟರ್‌ಫ್ಲೈ: ಆನ್ವೇಷಾ ಗಿರೀಶ –2 (ಕಾಲ: 2ನಿ.29.76ಸೆ),

400 ಮೀ ಮೆಡ್ಲೆ: ಜಿ. ಸಾಚಿ –2 (ಕಾಲ: 5ನಿ,30.70ಸೆ),

100 ಮೀ ಫ್ರೀಸ್ಟೈಲ್: ತನೀಶ್ ಜಾರ್ಜ್ ಮ್ಯಾಥ್ಯೂ –2 (53.13ಸೆ), ಸಿ.ಜೆ. ಸಂಜಯ್ _3 (53.71ಸೆ).

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !