ಸೋಮವಾರ, ಜುಲೈ 4, 2022
24 °C

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪಿ.ವಿ.ಸಿಂಧುಗೆ ಸಿಂಗಲ್ಸ್‌ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬಾಸೆಲ್‌: ಬ್ಯಾಡ್ಮಿಂಟನ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ಭಾರತದ ಪಿ.ವಿ.ಸಿಂಧು 'ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ'ಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಭಾನುವಾರ ಬಾಸೆಲ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಪನ್ ಅವರನ್ನು ಸಿಂಧು 21–16,21–8ರಿಂದ ಸೋಲಿಸಿದರು. 49 ನಿಮಿಷ ನಡೆದ ಹೋರಾಟದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಬುಸಾನನ್‌ ಎದುರು ಪೂರ್ಣ ಪ್ರಾಬಲ್ಯ ಸಾಧಿಸಿದರು.

ಆರಂಭದಲ್ಲಿ 7–5ರಿಂದ ಮುನ್ನಡೆ ಗಳಿಸಿದ್ದ ಸಿಂಧು ಅವರಿಗೆ ತಿರುಗೇಟು ನೀಡಿದ ಬುಸಾನನ್‌ 16–15 ಪಾಯಿಂಟ್‌ಗೆ ತಲುಪಿದ್ದರು. ಆದರೆ, ಸಿಂಧು ಚುರುಕಿನ ಆಟದ ಎದುರು ಬುಸಾನನ್‌ ಮಂಕಾದರು. ಮೊದಲ ಗೇಮ್‌ನಲ್ಲಿ 21–16ರಿಂದ ಸಿಂಧು ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಪಾಯಿಂಟ್‌ಗಳಿಕೆ ಅವಕಾಶ ನೀಡದ ಸಿಂಧು 21–8ರಲ್ಲಿ ನೇರ ಸೆಟ್‌ಗಳಿಂದ ಗೆಲುವು ತಮ್ಮದಾಗಿಸಿಕೊಂಡರು.

ಈ ಹಿಂದೆ ಸಿಂಧು ಮತ್ತು ಬುಸಾನನ್‌ 16 ಬಾರಿ ಎದುರಾಗಿದ್ದು, 15 ಪಂದ್ಯಗಳಲ್ಲಿ ಸಿಂಧು ಜಯ ಸಾಧಿಸಿದ್ದರು.

ಇದನ್ನೂ ಓದಿ–

79 ನಿಮಿಷ ನಡೆದಿದ್ದ ಸೆಮಿಫೈನಲ್‌ನಲ್ಲಿ ಸಿಂಧು 21–18, 15–21, 21–19ರಲ್ಲಿ ಥಾಯ್ಲೆಂಡ್‌ನ ಸುಪನಿಡ ಕಾಥೆತಾಂಗ್ ವಿರುದ್ಧ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು