ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಯಶಸ್ವಿನಿ ಪ್ರಶಸ್ತಿ ಡಬಲ್

Last Updated 13 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಯಶಸ್ವಿನಿ ಘೋರ್ಪಡೆ ಅವರು ಭಾನುವಾರ ಮುಕ್ತಾಯವಾದ ಕೆನರಾ ಬ್ಯಾಂಕ್ ಕಪ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು. ಅವರು ಯೂತ್ ಬಾಲಕಿಯರು ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಸುವರ್ಣ ಮಹೋತ್ಸದ ಸಂಭ್ರಮದಲ್ಲಿರುವ ಜಯನಗರ ಟೇಬಲ್ ಟೆನಿಸ್ ಸಂಸ್ಥೆ (ಜೆಟಿಟಿಎ) ಆಶ್ರಯದಲ್ಲಿ ನಡೆದ ಟೂರ್ನಿಯ ಯೂತ್ ಬಾಲಕಿಯರ ಫೈನಲ್‌ನಲ್ಲಿ ಎಸ್‌ಕೆಐನ ಯಶಸ್ವಿನಿ ಘೋರ್ಪಡೆ 11-7, 11-7, 5-11, 8-11, 11-8, 11-7 ಗೇಮ್‌ಗಳಿಂದ ಎಸ್‌ಬಿಟಿಯ ಕರುಣಾ ಗಜೇಂದ್ರನ್ ವಿರುದ್ಧ ಜಯಿಸಿದರು. ಮಹಿಳೆಯರ ವಿಭಾಗದಲ್ಲಿ ಯಶಸ್ವಿನಿ 11-8, 11-13 ,11-4, 11-6 ,11-9ರಲ್ಲಿ ತಮ್ಮ ಸಹಪಾಠಿ ಸುಷ್ಮಿತಾ ಆರ್. ಬಿದರಿ ವಿರುದ್ಧ ಮೈಲುಗೈ ಸಾಧಿಸಿದರು.

ಪುರುಷರ ಫೈನಲ್‌ನಲ್ಲಿ ಸಿಟಿಬಿಯ ಅನಿರ್ಬನ್ 11-6, 11-9, 7-11, 11-5, 9-11, 11-5 ರಿಂದ ನೈರುತ್ಯ ರೈಲ್ವೆಯ ಎಂ. ಕಲೈವಣನ್ ವಿರುದ್ಧ ಗೆದ್ದರು.

ಯೂತ್ ಬಾಲಕರ ಫೈನಲ್‌ನಲ್ಲಿ ಬಿಎಎನ್‌ನ ಸಮರ್ಥ್ ಕುರಡಿಕೇರಿ 11-7, 8-11, 11-8, 11-2, 10-12, 11-4ರಿಂದ ಎಂಎಸ್‌ಎಸ್‌ನ ನಿಖಿಲ್ ನಂದಾ ವಿರುದ್ಧ ಗೆದ್ದರು.

ತಮಿಳುನಾಡು ಪಾರಮ್ಯ: ಸುವರ್ಣಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆಹ್ವಾನಿತ ಟೂರ್ನಿಯಲ್ಲಿ ತಮಿಳುನಾಡಿನ ಆಟಗಾರರು ಪಾರಮ್ಯ ಸಾಧಿಸಿದರು.

ಪುರುಷರ ವಿಭಾಗದಲ್ಲಿ ತಮಿಳುನಾಡಿನ ಪ್ರಭಾಕರ್ 11-9, 11-8, 9-11, 11-3, 15-13 ತಮ್ಮದೇ ರಾಜ್ಯದ ಅಭಿನಯ್ ವಿರುದ್ಧ ಗೆದ್ದರು.ಮಹಿಳೆಯರ ಫೈನಲ್‌ನಲ್ಲಿ ತಮಿಳುನಾಡಿನ ಅಮೃತಾ ಪುಷ್ಪಕ್ 11-9, 11-9, 6-11, 11-9, 11-5, 11-8 ರಿಂದ ಸೆಲೆನಾ ದೀಪ್ತಿ ವಿರುದ್ಧ ಜಯಿಸಿದರು. ಜೂನಿಯರ್ ಬಾಲಕರಲ್ಲಿ ಸಂತೋಷ್, ಬಾಲಕಿಯರ ವಿಭಾಗದಲ್ಲಿ ನಿತ್ಯಶ್ರೀ, ಯೂತ್ ಬಾಲಕರ ವಿಭಾಗದಲ್ಲಿ ಯಶಸ್ವಿನಿ ಜಯಿಸಿದರು.

ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಟಿಟಿ ಆಟಗಾರರು ಮತ್ತಿತರರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT