ಸೋಮವಾರ, ಜುಲೈ 4, 2022
24 °C

ಟೇಬಲ್ ಟೆನಿಸ್: ತನಿಷ್ಕಾಗೆ ಬೆಳ್ಳಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ತನಿಷ್ಕಾ ಕಪಿಲ್ ಕಾಳಭೈರವ್ ಅವರು ಇಂದೋರ್‌ನಲ್ಲಿ ನಡೆಯುತ್ತಿರುವ ಕೆಡೆಟ್ ಮತ್ತು ಸಬ್‌ಜೂನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಯ 11 ವರ್ಷದೊಳಗಿನ ಬಾಲಕಿಯರ ವಿಭಾಗದ ಬೆಳ್ಳಿ ಪದಕ ಗಳಿಸಿದರು.

ಅಭಯ್ ಪ್ರಶಾಲ್ ಕ್ರೀಡಾಂಗಣಲ್ಲಿ  ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ತನಿಷ್ಕಾ 10-12, 5-11, 4-11ರಲ್ಲಿ ಅಂಕೋಲಿಕಾ ಚಕ್ರವರ್ತಿ ವಿರುದ್ಧ ಸೋತರು. ಸೆಮಿಫೈನಲ್‌ನಲ್ಲಿ ಸಹಾ ರಂಜಿನಿ ವಿರುದ್ಧ 7-11, 12-10, 11-13, 11-4, 11-8ರಲ್ಲಿ ಗೆದ್ದಿದ್ದ ಅವರು ಫೈನಲ್‌ನ ಮೊದಲ ಗೇಮ್‌ನಲ್ಲಿ ಮಾತ್ರ ಸ್ವಲ್ಪ ಪ್ರತಿರೋಧ ಒಡ್ಡಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ತನಿಷ್ಕಾ 10-12, 11-7, 11-8, 11-7ರಲ್ಲಿ ಪರ್ಣವಿ ಸೇಥ್‌ ವಿರುದ್ಧ ಜಯ ಗಳಿಸಿದರು. ಅರ್ಹತಾ ಸುತ್ತಿನ ಎರಡು ಪಂದ್ಯಗಳನ್ನು ಆಡಿ ಬಂದಿದ್ದ ಅವರು ಮೊದಲ ಸುತ್ತಿನಲ್ಲಿ ಶಾರಿಕಾ ಶಾಹಿದ್ ಮತ್ತು ಮಾಯಾ ಅಶ್ವತ್ಥ್ ವಿರುದ್ಧ ಗೆದ್ದಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು