ಮಂಗಳವಾರ, ಡಿಸೆಂಬರ್ 1, 2020
19 °C

ಈ ಸಲ ಟಾಟಾ ಸ್ಟೀಲ್ ಚೆಸ್ ಟೂರ್ನಿ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಈ ಬಾರಿಯ ಟಾಟಾ ಸ್ಟೀಲ್ ಇಂಡಿಯಾ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್ ಟೂರ್ನಿಯನ್ನು ಕೋವಿಡ್‌–19 ಕಾರಣದಿಂದ ರದ್ದು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಗ್ರ್ಯಾಂಡ್ ಚೆಸ್ ಟೂರ್ ಅಂಗವಾಗಿ ಕಳೆದ ವರ್ಷ ನಡೆದ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಭಾರತದ ವಿಶ್ವನಾಥನ್ ಆನಂದ್ ಸೇರಿದಂತೆ 10 ಗ್ರ್ಯಾಂಡ್‌ಮಾಸ್ಟರ್‌ಗಳು ಪಾಲ್ಗೊಂಡಿದ್ದರು.

‘ಕೋವಿಡ್‌ನಿಂದ ಉಂಟಾಗಿರುವ ಆತಂಕ ಇನ್ನು ಕೂಡ ಕಡಿಮೆಯಾಗಲಿಲ್ಲ. ಇಂಥ ಸಂದರ್ಭದಲ್ಲಿ ಚೆಸ್ ಪಟುಗಳ ಕ್ಷೇಮ ಕಾಪಾಡುವುದು ನಮ್ಮ ಹೊಣೆ. ಈ ನಿಟ್ಟಿನಲ್ಲಿ ಟೂರ್ನಿಯನ್ನು ಆಯೋಜಿಸದೇ ಇರಲು ನಿರ್ಧರಿಸಲಾಗಿದೆ’ ಎಂದು ಟಾಟಾ ಸ್ಟೀಲ್‌ನ ಕಾರ್ಪೊರೇಟ್ ಸೇವಾ ವಿಭಾಗದ ಉಪಾಧ್ಯಕ್ಷ ಚಾಣಕ್ಯ ಚಕ್ರವರ್ತಿ ತಿಳಿಸಿದರು.

‘ಈ ಟೂರ್ನಿಗಾಗಿ ಎರಡು ವರ್ಷಗಳಿಂದ ಕೋಲ್ಕತ್ತದಲ್ಲಿ ಇದ್ದೇನೆ. ಇಲ್ಲಿ ಸಿಕ್ಕಿದ ಅನುಭವಕ್ಕೆ ಪಾರವೇ ಇಲ್ಲ. ಚೆಸ್ ಅಭಿಮಾನಿಗಳಿಗೆ ಈ ಕ್ರೀಡೆಯ ಮೇಲೆ ಇರುವ ಪ್ರೀತಿ ಮತ್ತು ನಿಯಮಗಳ ಕುರಿತ ಅರಿವು ಅಪಾರ’ ಎಂದು ಟೂರ್ನಿಯ ನಿರ್ದೇಶಕ ಜೆರೋನ್ ವ್ಯಾನ್ ಡೆನ್ ಬರ್ಗ್‌ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು