ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಅಥ್ಲೀಟ್‌ಗಳು ನಿಜ ಜೀವನದ ಹೀರೋಗಳು: ಸಚಿನ್

Last Updated 23 ಆಗಸ್ಟ್ 2021, 10:05 IST
ಅಕ್ಷರ ಗಾತ್ರ

ಮುಂಬೈ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳನ್ನು ತುಂಬು ಹೃದಯದಿಂದ ಬೆಂಬಲಿಸಬೇಕು. ಅವರನ್ನು 'ನಿಜ ಜೀವನದ ಹೀರೋ'ಗಳಾಗಿ ಬಿಂಬಿಸಬೇಕುಎಂದು ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮನವಿ ಮಾಡಿದ್ದಾರೆ.

ಟೋಕಿಯೊ ಪ್ಯಾರಾಲಂಪಿಕ್ಸ್ ಕ್ರೀಡಾಕೂಟವು ಆಗಸ್ಟ್ 24 ಮಂಗಳವಾರದಿಂದ ಆರಂಭವಾಗಲಿದೆ.

ಇದು ಪ್ಯಾರಾಲಿಂಪಿಕ್ಸ್‌ಗೆ ಸಕಾಲವಾಗಿದೆ ಮತ್ತು ಟೋಕಿಯೊದಲ್ಲಿರುವ ದೇಶದ 54 ಕ್ರೀಡಾಪಟುಗಳ ತಂಡವನ್ನು ಬೆಂಬಲಿಸುವಂತೆ ಭಾರತೀಯರಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಸಚಿನ್ ತಿಳಿಸಿದ್ದಾರೆ.

'ಇಚ್ಛಾಶಕ್ತಿ, ಬದ್ಧತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಪ್ಯಾರಾ ಅಥ್ಲೀಟ್‌ಗಳು ಈ ಪ್ರಯಾಣಧ ಮೂಲಕ ಜನ ಸಾಮಾನ್ಯರಿಗೆ ತೋರಿಸಿಕೊಟ್ಟಿದ್ದಾರೆ. ನಮ್ಮೆಲ್ಲರ ಪಾಲಿಗೆ ಪ್ರೇರಣೆಯಾಗಿದ್ದಾರೆ' ಎಂದು ಹೇಳಿದರು.

'ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುವ ಈ ಅಥ್ಲೀಟ್‌ಗಳು ನಮ್ಮೆಲ್ಲರ ಪಾಲಿಗೆ ನಿಜ ಜೀವನದ ಹೀರೋಗಳು' ಎಂದು ತಿಳಿಸಿದ್ದಾರೆ.

'ಫಲಿತಾಂಶಏನೇ ಆಗಿರಲಿ, ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ಪ್ರತಿಯೊಬ್ಬರ ಪಾಲುದಾರಿಕೆಯನ್ನು ಆಚರಿಸಿಕೊಳ್ಳಬೇಕು. ನಾವು ಪ್ಯಾರಾಲಿಂಪಿಕ್ ಕ್ರೀಡಾಪಟುಗಳನ್ನು ಒಲಿಂಪಿಕ್ ಹೀರೋಗಳು ಮತ್ತು ಕ್ರಿಕೆಟಿಗರಂತೆ ಕೊಂಡಾಡಿದರೆ ಉತ್ತಮ ಸಮಾಜವಾಗಬಹುದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT