ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಪ್ರೀ ಕ್ವಾರ್ಟರ್‌ಗೆ ಪ್ರಜ್ವಲ್‌

ಮೈಸೂರು ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್
Last Updated 11 ಫೆಬ್ರುವರಿ 2019, 19:25 IST
ಅಕ್ಷರ ಗಾತ್ರ

ಮೈಸೂರು: ಸ್ಥಳೀಯ ಆಟಗಾರ ಎಸ್‌.ಡಿ.ಪ‍್ರಜ್ವಲ್‌ ದೇವ್‌ ಇಲ್ಲಿ ನಡೆಯುತ್ತಿರುವ ಮೈಸೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಆರೆಂಜ್‌ ಸ್ಪೋರ್ಟ್ಸ್‌ ಮತ್ತು ಮೈಸೂರು ಟೆನಿಸ್‌ ಕ್ಲಬ್‌ ಆಶ್ರಯದಲ್ಲಿ ಸೋಮವಾರ ನಡೆದ ಪ್ರಧಾನ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ 6–2, 6–1ರಲ್ಲಿ ರೋಹನ್‌ ಭಟಿಯಾ ಎದುರು ಗೆದ್ದರು. ಅಗ್ರಶ್ರೇಯಾಂಕದ ಪ್ರಜ್ವಲ್‌ ಎರಡೂ ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದರು.

ಇನ್ನುಳಿದ ಪಂದ್ಯಗಳಲ್ಲಿ ಅಲೋಕ್‌ ಆರಾಧ್ಯ6–4, 6–3ರಲ್ಲಿ ಅಭಿಷೇಕ್‌ ಶುಕ್ಲಾ ಎದುರೂ, ತೆಲಂಗಾಣದ ತೀರ್ಥ ಶಶಾಂಕ್‌ 6–3, 6–3ರಲ್ಲಿ ಕರ್ನಾಟಕದ ಆರ್ಯನ್‌ ಪತಂಗೆ ಮೇಲೂ, ಕರ್ನಾಟಕದ ರಿಷಿ ರೆಡ್ಡಿ 6–3, 6–1ರಲ್ಲಿ ಸೂರ್ಯ ಇಳಂಗೋವನ್‌ ವಿರುದ್ಧವೂ ಜಯ ಗಳಿಸಿದರು.

ಕರ್ನಾಟಕದ ಯಶ್‌ ಯಾದವ್‌ 6–2, 6–3ರಲ್ಲಿ ಹರಿಯಾಣದ ದೇವಿಂದರ್‌ ಮೇಲೂ, ತಮಿಳುನಾಡಿನ ಡಿ.ಸುರೇಶ್‌ 6–0, 6–0ರಲ್ಲಿ ಕರ್ನಾಟಕದ ದರ್ಶನ್‌ ಶ್ರೀನಿವಾಸ್‌ ವಿರುದ್ಧವೂ, ಮಹಾರಾಷ್ಟ್ರದ ಪ್ರಣೀತ್‌ 3–6, 6–3, 6–3ರಲ್ಲಿ ತಮಿಳುನಾಡಿನ ಸಿದ್ಧಾರ್ಥ್‌ ಆರ್ಯ ಎದುರೂ ಗೆಲುವು ಸಾಧಿಸಿದರು.

ತಮಿಳುನಾಡಿನ ವಿ.ವಿಘ್ನೇಶ್‌ 6–3, 6–2ರಲ್ಲಿ ಕರ್ನಾಟಕದ ವಿವೇಕ್‌ ಗೌತಮ್ ವಿರುದ್ಧವೂ, ಐದನೇ ಶ್ರೇಯಾಂಕದ ಆಟಗಾರ ಕರ್ನಾಟಕದ ಪಿ.ನಿಕ್ಷೇಪ್‌ 6–3, 6–3ರಲ್ಲಿ ಜಿ.ಮನೀಷ್‌ ಎದುರೂ, ಎ.ದೀಪಕ್‌ 2–6, 7–5, 6–2ರಲ್ಲಿ ತಮಿಳುನಾಡಿನ ಯಶವಂತ್‌ ಮೇಲೂ, ಅರ್ನವ್‌ ಪತಂಗೆ 6–3, 6–2ರಲ್ಲಿ ನಿಕಿನ್‌ ರೆಡ್ಡಿ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT