ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್, ಪ್ರೀಮಲ್‌ ಮುಡಿಗೆ ಪ್ರಶಸ್ತಿ ಕಿರೀಟ

ರಾಜ್ಯ ಆರನೇ ಟೆನ್‌ಪಿನ್ ಬೌಲಿಂಗ್‌ ಚಾಂಪಿಯನ್‌ಷಿಪ್‌
Last Updated 18 ಡಿಸೆಂಬರ್ 2020, 15:05 IST
ಅಕ್ಷರ ಗಾತ್ರ

ಬೆಂಗಳೂರು: ಅದ್ಭುತ ಆಟವಾಡಿದ ಆಕಾಶ್ ಅಶೋಕ್ ಕುಮಾರ್ ಹಾಗೂ ಪ್ರೀಮಲ್ ಜೊವಾನ್ ಅವರು ರಾಜ್ಯ ಆರನೇ ಟೆನ್‌ಪಿನ್ ಬೌಲಿಂಗ್‌ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಇಲ್ಲಿಯ ಚರ್ಚ್‌ಸ್ಟ್ರೀಟ್ ಅಮೀಬಾದಲ್ಲಿ ಶುಕ್ರವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಕಾಶ್ 29 ಪಿನ್‌ಗಳಿಂದ (435–406) ಹಾಲಿ ಚಾಂಪಿಯನ್ ಕಿಶನ್ ಆರ್‌. ಅವರನ್ನು ಸೋಲಿಸಿದರು. ಆಕಾಶ್ ಅವರಿಗೆ ಇದು ನಾಲ್ಕನೇ ಪ್ರಶಸ್ತಿ.

ಮಹಿಳೆಯರ ವಿಭಾಗದ ಫೈನಲ್ ಹಣಾಹಣಿಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತು. ಪ್ರೀಮಲ್ ಅವರು ಗೀತಾ ಪೂಜಾರಿ ಅವರನ್ನು ಕೇವಲ 1 ಪಿನ್ ಅಂತರದಿಂದ ಮಣಿಸಿದರು. ಪ್ರೀಮಲ್‌ ಒಟ್ಟು 324 ಪಿನ್ ಗಳಿಸಿದರೆ, ಗೀತಾ 323 ಪಿನ್ ಕಲೆಹಾಕಿದರು. ಪ್ರೀಮಲ್ ಅವರು ಗೆದ್ದ ಮೊದಲ ಟ್ರೋಫಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT