ಭಾನುವಾರ, ಸೆಪ್ಟೆಂಬರ್ 26, 2021
28 °C

Tokyo Olympics: ಚಿನ್ನದ ಪದಕವನ್ನು ಮಿಲ್ಕಾ ಸಿಂಗ್ ಅವರಿಗೆ ಅರ್ಪಿಸಿದ ನೀರಜ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಅವರು ತಮ್ಮ ಪದಕವನ್ನು ಇತ್ತೀಚಿಗೆ ನಿಧನರಾದ ‘ಫ್ಲೈಯಿಂಗ್ ಸಿಖ್‘ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ.

'ಮಿಲ್ಖಾ ಸಿಂಗ್ ಅವರು ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಕೇಳಲು ಬಯಸಿದ್ದರು. ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರ ಕನಸು ಈಡೇರಿದೆ’ ಎಂದು 23 ವರ್ಷದ ನೀರಜ್ ಚೋಪ್ರಾ ಹೇಳಿದ್ದಾರೆ.

ಫೈನಲ್ಸ್‌ನ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನಕ್ಕೆ ಮುತ್ತಿಟ್ಟರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯರಾದರು.

ಬಂಗಾರದ ಹುಡುಗ ನೀರಜ್ ಚೋಪ್ರಾ ಹೇಳಿಕೆಗೆ ಮಿಲ್ಕಾ ಸಿಂಗ್ ಕುಟುಂಬ ಧನ್ಯವಾದ ಸಲ್ಲಿಸಿದೆ. 

'ಇದಕ್ಕಾಗಿ ತಂದೆ ತುಂಬಾ ವರ್ಷಗಳ ಕಾಲ ಕಾಯುತ್ತಿದ್ದರು. ಭಾರತದ ಮೊದಲ ಅಥ್ಲೆಟಿಕ್ ಚಿನ್ನದ ದಕ ಗೆದ್ದಿರುವುದು ಅವರ ಕನಸು ಕೊನೆಗೂ ನನಸಾಗಿದೆ. ನಾನು ಈ ಟ್ವೀಟ್ ಮಾಡುವಾಗ ನಾನು ಅಳುತ್ತಿದ್ದೇನೆ. ತಂದೆ ಮೇಲೆ ಅಳುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ನಿಮ್ಮ ಒಲಿಂಪಿಕ್ಸ್ ಪದಕವನ್ನು ಅವರಿಗೆ ಅರ್ಪಿಸಿದ್ದಕ್ಕಾಗಿ ಧನ್ಯವಾದಗಳು’ಮಿಲ್ಕಾ ಸಿಂಗ್ ವರ ಮಗ ಜೀವ್ ಟ್ವಿಟ್ ಮಾಡಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ನೀವು ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ಮಾತ್ರ ಗೆದ್ದಿಲ್ಲ, ನೀವು ಅದನ್ನು ನನ್ನ ತಂದೆಗೆ ಅರ್ಪಿಸಿದ್ದೀರಿ. ಮಿಲ್ಖಾ ಕುಟುಂಬವು ಈ ಗೌರವಕ್ಕೆ ಚಿರಯಾಣಿಯಾಗಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು