ಶುಕ್ರವಾರ, ಸೆಪ್ಟೆಂಬರ್ 17, 2021
23 °C

Tokyo Olympics: ಪದಕದ ಸುತ್ತಿನಲ್ಲಿ ಮಂಕಾದ ಸೌರಭ್‌ ಚೌಧರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಶೂಟಿಂಗ್‌ ರೇಂಜ್‌ನಲ್ಲಿ ಮೊದಲ ದಿನ ಭಾರತಕ್ಕೆ ನಿರಾಸೆ ಕಾಡಿತು. ಭರವಸೆಯ ಸ್ಪರ್ಧಿ ಸೌರಭ್‌ ಚೌಧರಿ ಪದಕದ ಸುತ್ತಿನಲ್ಲಿ ಮಂಕಾದರು.

ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸೌರಭ್‌, ಏಳನೇ ಸ್ಥಾನಕ್ಕೆ ತೃಪ್ತರಾದರು. 25 ಶಾಟ್‌ಗಳ ಫೈನಲ್‌ನಲ್ಲಿ ಅವರು 137.4 ಸ್ಕೋರ್‌ ಗಳಿಸಲಷ್ಟೇ ಶಕ್ತರಾದರು. ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ (586 ಸ್ಕೋರ್‌) ಗಳಿಸಿದ್ದ ಸೌರಭ್‌, ಫೈನಲ್‌ನಲ್ಲಿ ನಿಖರ ಗುರಿ ಹಿಡಿಯಲಿಲ್ಲ.

ಅಭಿಷೇಕ್‌ ವರ್ಮಾ (575) ಅರ್ಹತಾ ಹಂತದಲ್ಲೇ ಹೊರಬಿದ್ದರು. ಇರಾನ್‌ನ ಜಾವೇದ್‌ ಫೊರೊಗಿ (244.8) ಒಲಿಂಪಿಕ್‌ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಸರ್ಬಿಯಾದ ದಮಿರ್ ಮಿಕೆಚ್‌ ಮತ್ತು ಚೀನಾದ ಪಾಂಗ್‌ ವೀ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಮಹಿಳೆಯರ 10 ಮೀ. ಏರ್‌ ರೈಫಲ್‌ನಲ್ಲಿ ಸ್ಪರ್ಧಿಸಿದ್ದ ಇಳವೆನ್ನಿಲ ವಾಳರಿವನ್‌ ಮತ್ತು ಅಪೂರ್ವಿ ಚಾಂಡೆಲಾ ಅರ್ಹತಾ ಸುತ್ತಿನಲ್ಲೇ ಹೋರಾಟ ಮುಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು