ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್: ಕೋವಿಡ್‌ ನಿಯಮಗಳ ಅಂತಿಮ ಆವೃತ್ತಿ ಬಿಡುಗಡೆ ಸಾಧ್ಯತೆ

Last Updated 15 ಜೂನ್ 2021, 14:05 IST
ಅಕ್ಷರ ಗಾತ್ರ

ಟೋಕಿಯೊ: ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಉಪಾಧ್ಯಕ್ಷ ಜಾನ್ ಕೋಟ್ಸ್ ಮಂಗಳವಾರ ಟೋಕಿಯೊಗೆ ಆಗಮಿಸಿದ್ದು, ಆಯೋಜಕರು ಹಾಗೂಐಒಸಿ ಕೋವಿಡ್‌ ನಿಯಮಗಳ ಅಂತಿಮ ಆವೃತ್ತಿಯ ಪುಸ್ತಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಕೋಟ್ಸ್ ಅವರು ಟೋಕಿಯೊ ಕ್ರೀಡಾಕೂಟದ ಹೊಣೆ ಹೊತ್ತಿರುವ ಅಧಿಕಾರಿಯಾಗಿದ್ದಾರೆ. ಜಪಾನ್‌ನಲ್ಲಿ ಕೋವಿಡ್‌ನಿಂದಾಗಿ ತುರ್ತುಪರಿಸ್ಥಿತಿಯಿದ್ದರೂ ಕೂಟ ನಿಗದಿಯಂತೆ ನಡೆಯಲಿದೆ ಎಂದು ಹೇಳಿದ ಅವರು ವಿವಾದಿತ ವ್ಯಕ್ತಿಯಾಗಿದ್ದಾರೆ.

ಆಸ್ಟ್ರೇಲಿಯಾದಿಂದ ಕೋಟ್ಸ್ ಆಗಮಿಸಿರುವುದನ್ನು ಒಲಿಂಪಿಕ್ಸ್ ಆಯೋಜಕರು ಖಚಿತಪಡಿದ್ದಾರೆ. ಅವರು ಮೂರು ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲಿದ್ದಾರೆ ಎಂದು ಅಧಿಕಾರಿಗಳು ಕಳೆದ ವಾರ ಹೇಳಿದ್ದರು.

ಟೋಕಿಯೊ ಸೇರಿದಂತೆ ಜಪಾನ್‌ನ ಇತರ ನಗರಗಳಲ್ಲಿ ಇದೇ 20ರವರೆಗೆ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ದೇಶದಲ್ಲಿ ಸೋಂಕು ದೃಢ ಪ್ರಮಾಣದಲ್ಲಿ ಕುಸಿತ ಕಂಡಿದೆ. ಲಸಿಕೆ ನೀಡುವ ಪ್ರಕ್ರಿಯೆಯೂ ವೇಗ ಪಡೆದುಕೊಂಡಿದೆ.

ಪ್ಲೇ ಬುಕ್ಸ್ ಎಂದು ಕರೆಯಲಾಗುವ ಈ ಪುಸ್ತಿಕೆಯು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕುವ ಅಥ್ಲೀಟ್‌ಗಳು ಮತ್ತು ಇತರರು ಅನುಸರಿಸಬೇಕಾದ ಕೋವಿಡ್ ತಡೆ ನಿಯಮಗಳನ್ನು ಒಳಗೊಂಡಿರುತ್ತದೆ.

ಈ ನಿಯಮಗಳ ಎರಡನೇ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ಪ್ರಕಟಿಸಲಾಗಿತ್ತು. ನಿಯಮಗಳನ್ನು ವೈಜ್ಞಾನಿಕ ಮೌಲ್ಯಮಾಪನದ ಆಧಾರದಲ್ಲಿ ರಚಿಸಲಾಗಿಲ್ಲ ಎಂದು ‘ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‘ ಸಂಪಾದಕೀಯದಲ್ಲಿ ಟೀಕಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT