ಭಾನುವಾರ, ಜುಲೈ 3, 2022
24 °C

ಟೇಬಲ್ ಟೆನಿಸ್‌: ಮುಖ್ಯ ಸುತ್ತಿಗೆ ತೃಪ್ತಿ, ಸಾನ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ತೃಪ್ತಿ ಪುರೋಹಿತ್ ಮತ್ತು ಸಾನ್ವಿ ಮಂಡೇಕರ್, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕಿಯರ ಸಬ್‌ ಜೂನಿಯರ್ ಮತ್ತು ಕೆಡೆಟ್ ವಿಭಾಗದ ಮುಖ್ಯ ಸುತ್ತು ಪ್ರವೇಶಿಸಿದರು. ದೇಶ್ನಾ ವಂಶಿಕಾ, ನಿಹಾರಿಕಾ ಮತ್ತು ಸಹನಾಮೂರ್ತಿ ಕೂಡ ಸಬ್‌ ಜೂನಿಯರ್ ವಿಭಾಗದ ಮುಖ್ಯ ಸುತ್ತಿಗೆ ಲಗ್ಗೆ ಇಟ್ಟರು.

ಅರ್ಹತಾ ಸುತ್ತಿನಲ್ಲಿ ತೃಪ್ತಿ ಪುರೋಹಿತ್ ಉತ್ತರಪ್ರದೇಶದ ಕೆ.ದಿಶಾ ವಿರುದ್ಧ 11-9,11-9,6-11,12-14,11-5ರಲ್ಲಿ ಮತ್ತು ಪಂಜಾಬ್‌ನ ಏಕ್ತಾ ವಿರುದ್ಧ 11-4,11-7, 11-6ರಲ್ಲಿ ಜಯ ಗಳಿಸಿದರು. ದೇಶ್ನಾ ಕೇರಳದ ಕೃಷ್ಣಾ ಸ್ಮೃತಿ ವಿರುದ್ಧ 11-6,5-11,11-7,11-7ರಲ್ಲಿ ಹಾಗೂ ಜಾರ್ಖಂಡ್‌ನ ರಚಿತಾ ಡೇ ವಿರುದ್ಧ 11-8,11-8,11-7ರಲ್ಲಿ ಗೆದ್ದರು.

ನಿಹಾರಿಕಾ ತೆಲಂಗಾಣದ ಮೆರ್ಸಿ ಅವರನ್ನು 9-11,11-3,6-11,11-4,11-9ರಲ್ಲಿ ಮತ್ತು ಪಶ್ಚಿಮ ಬಂಗಾಳದ ದೇಶುತಾ ಡೇ ಅವರನ್ನು 11-7,5-11,7-11,13-11,11-5ರಲ್ಲಿ ಸೋಲಿಸಿದರು. ಸಹನಾ ಮೂರ್ತಿ ರಾಜಸ್ಥಾನದ ಅನನ್ಯ ಸಿನ್ಹಾ ವಿರುದ್ಧ 14-12,11-7,11-3ರಲ್ಲಿ ಮತ್ತು ತಮಿಳುನಾಡಿನ ಅಮೃತಾ ವಿರುದ್ಧ 11-8,11-9,11-3ರಲ್ಲಿ ಗೆಲುವು ಸಾಧಿಸಿದರು.

ಕೆಡೆಟ್ ವಿಭಾಗದಲ್ಲಿ ಸಾನ್ವಿ ಮಹಾರಾಷ್ಟ್ರದ ಸ್ವರ ವಿರುದ್ಧ 12-14,11-8,11-9,11-4ರಲ್ಲಿ, ತೆಲಂಗಾಣದ ಭುವನಿಧಾ ವಿರುದ್ಧ 11-5,14-12,9-11,11-5ರಲ್ಲಿ ಮತ್ತು ರಾಜಸ್ಥಾನದ ಭೂಮಿ ವಿರುದ್ಧ 11-4,11-5,11-6ರಲ್ಲಿ ಜಯ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು