ಉಡುಪಿ: ಎರಡನೇ ಶ್ರೇಯಾಂಕದ ಉನ್ನತಿ ಹೂಡಾ ಭಾನುವಾರ ಇಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು. ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಅನ್ಷ್ ನೇಗಿ ಚಾಂಪಿಯನ್ ಆಗಿದ್ದಾರೆ.

ಭಾನುವಾರ ಇಲ್ಲಿನ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉನ್ನತಿ 21-18, 21-12ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕಿತ ಆಟಗಾರ್ತಿ, ಆಂಧ್ರಪ್ರದೇಶದ ನವ್ಯಾ ಖಂಡೇರಿ ವಿರುದ್ಧ ಜಯಿಸಿದರು.

ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ಉನ್ನತಿ ಹೂಡಾ ಹಾಗೂ ಆಂಧ್ರ ಪ್ರದೇಶದ ದಿವಿತಾ ಪೊಟ್ಟರಸಿ ಜೋಡಿ 21-19, 21-19 ರ ನೇರ ಸೆಟ್‌ಗಳಲ್ಲಿ ಆಂಧ್ರಪ್ರದೇಶದ ನವ್ಯಾ ಕಂಡೇರಿ ಹಾಗೂ ಶ್ರೀಯಾಂಶಿ ವಾಲಿಶೆಟ್ಟಿ ಜೋಡಿಯನ್ನು ಮಣಿಸಿ ಪ್ರಶಸ್ತಿ ಗಳಿಸಿತು.

ಬಾಲಕರ ಫೈನಲ್‌ನಲ್ಲಿ ಉತ್ತರಾಖಂಡದ ಅನ್ಷ್ ನೇಗಿ 21-15 21-13ರಲ್ಲಿ ನೇರ ಸೆಟ್‌ಗಳಿಂದ ತೆಲಂಗಾಣದ ಎನ್. ಪ್ರಣವ್ ರಾಮ್ ಅವರನ್ನು ಸೋಲಿಸಿದರು.

ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಉತ್ತರಾಖಂಡದ ವಂಶ್ ಪ್ರತಾಪ್ ಸಿಂಗ್ ಕರ್ಕಿ ಹಾಗೂ ಕೌಸ್ತುಭ್ ತ್ಯಾಗಿ ಜೋಡಿ 21-19, 14-21, 21-11ರಲ್ಲಿ ಉತ್ತರಾಖಂಡದ ಅನ್ಷ್ ನೇಗಿ ಹಾಗೂ ಸಿದ್ಧಾರ್ಥ್ ರಾವತ್ ಜೋಡಿಯನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.