ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬ್ಲಿಟ್ಜ್‌ ಚೆಸ್ ಟೂರ್ನಿ: ಎರಡನೇ ಸ್ಥಾನದಲ್ಲಿ ವೈಶಾಲಿ

ವಿಶ್ವ ಬ್ಲಿಟ್ಜ್‌ ಚೆಸ್ ಟೂರ್ನಿ: ಜಂಟಿ ಮೂರನೇ ಸ್ಥಾನದಲ್ಲಿ ಭಾರತದ ಕೊನೆರು ಹಂಪಿ
Last Updated 30 ಡಿಸೆಂಬರ್ 2021, 14:10 IST
ಅಕ್ಷರ ಗಾತ್ರ

ವಾರ್ಸೊ, ಪೋಲೆಂಡ್‌: ಅಮೋಘ ಆಟ ಮುಂದುವರಿಸಿರುವ ಭಾರತದ ಆರ್‌. ವೈಶಾಲಿ ಅವರು ವಿಶ್ವ ಬ್ಲಿಟ್ಜ್‌ ಚೆಸ್ ಚಾಂಪಿಯನ್‌ಷಿಪ್‌ನ ಎರಡನೇ ಸ್ಥಾನದಲ್ಲಿದ್ದಾರೆ. ಅನುಭವಿ ಆಟಗಾರ್ತಿ ಕೊನೆರು ಹಂಪಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

20 ವರ್ಷದ ವೈಶಾಲಿ ಒಂಬತ್ತನೇ ಸುತ್ತಿನ ಕೊನೆಯಲ್ಲಿ 7.5 ಪಾಯಿಂಟ್‌ಗಳನ್ನು ಕಲೆ ಹಾಕಿದ್ದಾರೆ. ಉಕ್ರೇನ್‌ನ ಮರಿಯಾ ಮುಜಿಚುಕ್‌ ಮತ್ತು ರಷ್ಯಾದ ವ್ಯಾಲೆಂಟಿನಾ ಗುನಿನಾ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಅವರು ಮುನ್ನಡೆ ಸಾಧಿಸಿದರು. ಎಂಟು ಪಾಯಿಂಟ್‌ಗಳೊಂದಿಗೆ ಕಜಕಸ್ತಾನದ ಬಿಬಿಸಾರ ಅಸ್ವಾಬಯೆವಾ ಅಗ್ರ ಸ್ಥಾನದಲ್ಲಿದ್ದಾರೆ.

ಭಾರತದ ಅಗ್ರ ಕ್ರಮಾಂಕದ ಆಟಗಾರ್ತಿ ಕೊನೆರು ಹಂಪಿ ಅವರು ರಷ್ಯಾದ ಅಲೆಕ್ಸಾಂಡ್ರ ಕೊಸ್ತೆನ್ಯುಕ್ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದರೆ. ಟರ್ಕಿಯ ಎಕಟೇರಿನಾ ಅಟಾಲಿಕ್ ಮತ್ತು ಕಜಕಸ್ತಾನದ ಜಂಜಾಯ ಅಬ್ದುಮಲಿಕ್ ವಿರುದ್ಧ ಹಂಪಿ ಸೋತಿದ್ದರು. 9ನೇ ಸುತ್ತಿನಲ್ಲಿ ಅಲೆಕ್ಸಾಂಡ್ರ ಗೊರಿಚ್ಕಿನ ಅವರನ್ನು ಮಣಿಸಿದರು. ರ‍್ಯಾಪಿಡ್ ವಿಭಾಗದಲ್ಲಿ ಅವರು 7.5 ಪಾಯಿಂಟ್‌ಗಳೊಂದಿಗೆ 6ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದ್ದರು.

ಭಾರತದ ವಂತಿಕಾ ಅಗರವಾಲ್‌ ಮತ್ತು ಪದ್ಮಿನಿ ರಾವುತ್ ಕ್ರಮವಾಗಿ 32 ಮತ್ತು 57ನೇ ಸ್ಥಾನದಲ್ಲಿದ್ದಾರೆ.

ಕಾರ್ಲ್‌ಸನ್‌ಗೆ ನಿರಾಸೆ

ಮುಕ್ತ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಮ್ಯಾಗ್ನಸ್ ಕಾರ್ಲ್‌ಸನ್‌ ನಿರಾಸೆಗೊಂಡಿದ್ದಾರೆ. ಮೊದಲ ದಿನ ನಡೆದ ಮೂರು ಪಂದ್ಯಗಳಲ್ಲಿ ಅವರು ಸೋತಿದ್ದಾರೆ. ಲೆವಾನ್ ಅರೋನಿಯನ್ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ ವಿಶ್ವದ ಒಂದನೇ ನಂಬರ್ ಆಟಗಾರ ಕಾರ್ಲ್‌ಸನ್‌ ಅವರ ಎದುರು ಡ್ರಾ ಸಾಧಿಸಿದರು. ಯುವ ಆಟಗಾರ ಡಿ.ಗುಹೇಶ್‌ 81ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT