ಸೋಮವಾರ, ಜೂನ್ 21, 2021
27 °C
ರಾಜ್ಯ ರ‍್ಯಾಂಕಿಂಗ್‌ ವೆಟರನ್ ಟೇಬಲ್ ಟೆನಿಸ್ ಟೂರ್ನಿ

ಟಿಟಿ: ಭಾವನಾ, ಅಶ್ವಿನ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾವನಾ ಹರ್ನೆ ಹಾಗೂ ಅಶ್ವಿನ್ ಗೋಪಾಲ್ ಅವರು ರಾಜ್ಯ ರ‍್ಯಾಂಕಿಂಗ್ ವೆಟರನ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 50 ವರ್ಷದ ಮೇಲಿನ ಮಹಿಳೆಯರ ಹಾಗೂ 40 ವರ್ಷದ ಮೇಲಿನ ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಮಂಗಳವಾರ ಪ್ರಶಸ್ತಿ ಗೆದ್ದರು.

ಕರ್ನಾಟಕ ಟೇಬಲ್ ಟೆನಿಸ್‌ ಸಂಸ್ಥೆ (ಕೆಟಿಟಿಎ) ಹಾಗೂ ರಾಜ್ಯ ವೆಟರನ್ ಟೇಬಲ್‌ ಟೆನಿಸ್ ಸಂಸ್ಥೆ (ಕೆವಿಟಿಟಿಎ) ಆಶ್ರಯದಲ್ಲಿ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು.

50 ವರ್ಷದ ಮೇಲಿನವರ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾವನಾ ಅವರು ನಾಗರತ್ನಾ ವಿ. ಅವರನ್ನು ಸೋಲಿಸಿದರು. ಅಶ್ವಿನ್ ಗೋಪಾಲ್ ಅವರು ಫೈನಲ್ ಹಣಾಹಣಿಯಲ್ಲಿ ಸಂದೀಪ್ ಕೆ.ಎನ್.ಅವರನ್ನು ಸೋಲಿಸಿದರು. 40 ವರ್ಷಕ್ಕಿಂತ ಮೇಲಿನ ಮಹಿಳೆಯರ ಸಿಂಗಲ್ಸ್‌ ಫೈನಲ್ ಪಂದ್ಯದಲ್ಲಿ ಅನ್ಮೋನಾ ಬರುವಾ ಅವರು ದೀಪ್ತಿ ಕುಂಬತ್ ಅವರನ್ನು ಸೋಲಿಸಿ ಟ್ರೋಫಿ ಗೆದ್ದರು.

60 ವರ್ಷಕ್ಕಿಂತ ಮೇಲಿನ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯು ಶ್ಯಾಮ ಗೌಡ ಅವರ ಪಾಲಾಯಿತು. ಫೈನಲ್ ಪಂದ್ಯದಲ್ಲಿ ಅವರು ಜಗದೀಶ್ ಸಿ.ಎಸ್‌. ಅವರನ್ನು ಸೋಲಿಸಿದರು.

50 ವರ್ಷಕ್ಕಿಂತ ಮೇಲಿನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶಿವಕುಮಾರ್ ಎಂ.ಕೆ. ಪ್ರಶಸ್ತಿ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಅವರು ಚಂದ್ರಶೇಖರ್ ಕೆ. ಅವರ ಸವಾಲು ಮೀರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು