ಗುರುವಾರ , ಮೇ 26, 2022
23 °C
ದಕ್ಷಿಣ ವಲಯ ಅಂತರ ವಿವಿ ಹಾಕಿ ಟೂರ್ನಿ: ಕರ್ನಾಟಕ, ಧಾರವಾಡ, ದಾವಣಗೆರೆ ವಿವಿಗಳಿಗೆ ಸೋಲು

ದಕ್ಷಿಣ ವಲಯ ಅಂತರ ವಿವಿ ಹಾಕಿ ಟೂರ್ನಿ: ವಿಟಿಯು, ಕ್ರೈಸ್ಟ್ ತಂಡಗಳ ಜಯದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯ ತಂಡಗಳು ಬೆಂಗಳೂರು ವಿಶ್ವವಿದ್ಯಾಲಯ ಆಶ್ರಯದಲ್ಲಿ ಭಾನುವಾರ ಆರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಹಾಕಿ ಟೂರ್ನಿಯಲ್ಲಿ ಜಯ ಸಾಧಿಸಿದವು.

ವಿಟಿಯು 7–0ಯಿಂದ ಕಲಬುರ್ಗಿಯ ಗುಲ್ಬರ್ಗ ವಿವಿಯನ್ನು ಮತ್ತು ಕ್ರೈಸ್ಟ್ ವಿವಿ 1–0ಯಿಂದ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯನ್ನು ಮಣಿಸಿತು. ದಾವಣಗೆರೆ ವಿವಿ, ಮಂಗಳೂರು ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿ ತಂಡಗಳು ಸೋತವು.

ಉದ್ಘಾಟನಾ ಪಂದ್ಯದಲ್ಲಿ ಕಣ್ಣೂರು ವಿವಿ 2–1ರಲ್ಲಿ ಧಾರವಾಡ ವಿವಿಯನ್ನು ಮಣಿಸಿದರೆ ಕೋಟಯಂನ ಮಹಾತ್ಮ ಗಾಂಧಿ ವಿವಿ 1–0ಯಿಂದ ಸೇಲಂನ ಪೆರಿಯಾರ್‌ ವಿವಿಯನ್ನು ಸೋಲಿಸಿತು. ಕಾರೈಕುಡಿಯ ಅಳಗಪ್ಪ ವಿವಿ 3–1ರಲ್ಲಿ ಕಾಕಿನಾಡದ ಜೆಎನ್‌ಟಿಯುವನ್ನು,  ಕಡಪದ ಯೋಗಿ ವೇಮನ ವಿವಿ 12–0ಯಿಂದ ದಾವಣಗೆರೆ ವಿವಿಯನ್ನು, ತಿರುಪತಿಯ ಶ್ರೀ ವೆಂಕಟೇಶ್ವರ ವಿವಿ 4–2ರಲ್ಲಿ ಕೊಯಮತ್ತೂರಿನ ರಾಮಕೃಷ್ಣ ಮಿಷನ್‌ ತಂಡವನ್ನು ಸೋಲಿಸಿತು.

ಮಹೆಬೂಬ್‌ನಗರದ ಪಾಲಮುರು ವಿವಿ 6–0ಯಿಂದ ಕರೀಂ ನಗರದ ಶಾತವಾಹನ ವಿವಿಯನ್ನು, ತಿರುವಳ್ಳೂರಿನ ಮನೋನ್ಮಣಿಯಂ ಸುಂದರರ್ ವಿವಿ 9–0ಯಿಮದ ಆಂಧ್ರದ ರಾಯಲ್‌ಸೀಮಾ ವಿವಿಯನ್ನು, ಚೆನ್ನೈನ ಅಣ್ಣಾ ವಿವಿ 5–0ಯಿಂದ  ನೆಲಗೊಂಡದ ಎಂಜಿ ವಿವಿಯನ್ನು, ಕೇರಳ ವಿವಿ 7–0ಯಿಂದ ಶ್ರೀಕಾಕುಳಂನ ಡಾ.ಬಿ.ಆರ್‌.ಅಂಬೇಡ್ಕರ್ ವಿವಿಯನ್ನು, ವಿಶಾಖಪಟ್ಟಣದ ಆಂಧ್ರ ವಿವಿ 2–1ರಲ್ಲಿ ಮೆಳ್ಳಕೊಟ್ಟಿಯೂರ್‌ನ ಟಿಎನ್‌ಪಿಎಸ್‌ಯುವನ್ನು ಮತ್ತು ಹೈದರಾಬಾದ್‌ನ ಒಸ್ಮಾನಿಯಾ ವಿವಿ 6–0ಯಿಂದ ಮಂಗಳೂರು ವಿವಿಯನ್ನು ಮಣಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು