ಬುಧವಾರ, ಜುಲೈ 15, 2020
21 °C

ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುರುಗ್ರಾಮ: ಈ ವರ್ಷದ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ಟೂರ್ನಿಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ಮಂಗಳವಾರ ರದ್ದು ಮಾಡಲಾಗಿದೆ.

ಈ ಟೂರ್ನಿಯು ಲೇಡೀಸ್‌ ಯೂರೋಪಿಯನ್‌ ಟೂರ್‌ನ ಸಹಭಾಗಿತ್ವದಲ್ಲಿ ನಡೆಯುತ್ತಿತ್ತು. ಮುಂದಿನ ವರ್ಷದ ಟೂರ್ನಿಯು ಅಕ್ಟೋಬರ್‌ ತಿಂಗಳಲ್ಲಿ ಗುರುಗ್ರಾಮದ ಡಿಎಲ್‌ಎಫ್‌ ಗ್ಯಾರಿ ಪ್ಲೇಯರ್‌ ಅಂಗಣ ಹಾಗೂ ಕಂಟ್ರಿ ಕ್ಲಬ್‌ ಅಂಗಣದಲ್ಲಿ ನಡೆಯಲಿದೆ.

‘ಆಟಗಾರರು ಮತ್ತಿತರರ ಆರೋಗ್ಯ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಭಾರತ ಮಹಿಳಾ ಗಾಲ್ಫ್‌ ಸಂಸ್ಥೆ (ಡಬ್ಲ್ಯುಜಿಎಐ) ಹಾಗೂ ದ ಲೇಡೀಸ್‌ ಯೂರೋಪಿಯನ್‌ ಟೂರ್‌ (ಎಲ್‌ಇಟಿ) ಸ್ಪಷ್ಟಪಡಿಸಿವೆ.

‘ಇದೊಂದು ಬಹಳ ಕಠಿಣ ನಿರ್ಧಾರ. ಆದರೆ ಕೋವಿಡ್‌ ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟೂರ್ನಿಯನ್ನು ರದ್ದುಗೊಳಿಸುವುದು ಸೂಕ್ತವಾದ ನಿರ್ಧಾರ’ ಎಂದು ಡಬ್ಲ್ಯುಜಿಎಐ ಅಧ್ಯಕ್ಷೆ ಕವಿತಾ ಸಿಂಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು