ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಭಾರತ ಮಹಿಳಾ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತ ಮಹಿಳಾ ರಿಕರ್ವ್ ಆರ್ಚರಿ ತಂಡವು ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಮೂರನೇ ಹಂತದ ಟೂರ್ನಿಯಲ್ಲಿ ಶುಕ್ರವಾರ ಫೈನಲ್‌ ತಲುಪಿದೆ.

ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ತಂಡವು ಸೆಮಿಫೈನಲ್ ಹಣಾಹಣಿಯಲ್ಲಿ 6–2ರಿಂದ ಆರನೇ ಕ್ರಮಾಂಕದ ಫ್ರಾನ್ಸ್ ತಂಡವನ್ನು ಮಣಿಸಿತು. ಪಂದ್ಯದಲ್ಲಿ ಕೇವಲ ಒಂದು ಸೆಟ್‌ಅನ್ನು ಮಾತ್ರ ಭಾರತದ ಬಿಲ್ಗಾರರು ಕೈಚೆಲ್ಲಿದರು. ಲೀಸಾ ಬಾರ್ಬೆಲಿನ್‌, ಆಡ್ರೆ ಅಡಿಸಿಯೊಮ್‌ ಮತ್ತು ಆ್ಯಂಜೆಲಿನ್ ಕೊಹೆಂಡೆಟ್‌ ಎದುರಾಳಿ ತಂಡದಲ್ಲಿದ್ದರು.

ಭಾನುವಾರ ನಡೆದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ತಮಗಿಂತ ಕಡಿಮೆ ರ‍್ಯಾಂಕಿನ ಕೊಲಂಬಿಯಾ ಎದುರು ನಿರಾಸೆ ಅನುಭವಿಸಿತ್ತು. ಆದರೆ ಇಲ್ಲಿ ಎರಡನೇ ಅತ್ಯುತ್ತಮ ಸಾಮರ್ಥ್ಯ ತೋರುವ ಮೂಲಕ ಲಯಕ್ಕೆ ಮರಳಿತು.

ಗ್ವಾಟೆಮಾಲಾ ಸಿಟಿಯಲ್ಲಿ ನಡೆದ ವಿಶ್ವಕ‍ಪ್ ಮೊದಲ ಹಂತದ ಟೂರ್ನಿಯಲ್ಲಿ ಈ ಮೂವರು ಚಿನ್ನದ ಪದಕ ಗೆದ್ದುಕೊಂಡಿದ್ದರು. ಆಗ ಫೈನಲ್‌ನಲ್ಲಿ ಎದುರಿಸಿದ್ದ ಮೆಕ್ಸಿಕೊ ತಂಡವನ್ನೇ ಈ ಬಾರಿಯೂ ಮುಖಾಮುಖಿಯಾಗಲಿದ್ದು, ಭಾನುವಾರ ಈ ಹಣಾಹಣಿ ನಡೆಯಲಿದೆ.

ಪುರುಷರ ತಂಡವು ಎಂಟರಘಟ್ಟದ ಪಂದ್ಯದ ಶೂಟ್‌ ಆಫ್‌ನಲ್ಲಿ ಜರ್ಮನಿ ಎದುರು ಸೋಲು ಅನುಭವಿಸಿತು. ಅತನು ದಾಸ್, ತರುಣದೀಪ್ ರಾಯ್‌ ಮತ್ತು ಪ್ರವೀಣ್ ಜಾಧವ್‌ ಅವರಿದ್ದ ತಂಡವು ಜರ್ಮನಿಯ ಮೊರಿಟ್ಜ್‌ ವೈಸರ್‌, ಮ್ಯಾಕ್ಸಿಮಿಲನ್‌ ವೆಕ್‌ಮುಲ್ಲರ್‌ ಮತ್ತು ಫ್ಲಾರಿಯನ್‌ ಉನ್ರುಹ್ ಎದುರು ನಿರಾಸೆ ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು