ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಲವ್ಲಿನಾ ಬೊರ್ಗೊಹೈನ್ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಲೈಟ್ ಮಿಡ್ಲ್‌ವೇಟ್ ವಿಭಾಗದ (70 ಕೆಜಿ) ಬೌಟ್‌ನಲ್ಲಿ ಲವ್ಲಿನಾ 3–2ರಿಂದ ಚೀನಾ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಪರಾಭವಗೊಳಿಸಿದರು. ಟೋಕಿಯೊ ಒಲಿಂಪಿಕ್ಸ್ ಬಳಿಕ ಲವ್ಲಿನಾ ಮೊದಲ ಬಾರಿ ಕಣಕ್ಕಿಳಿದಿದ್ದಾರೆ.
2018ರ ಆವೃತ್ತಿಯ ಸೆಮಿಫೈನಲ್‌ನಲ್ಲಿ ಲವ್ಲಿನಾ, ಮಾಜಿ ವಿಶ್ವ ಚಾಂಪಿಯನ್ ಚೆನ್ ಎದುರು ಮಣಿದಿದ್ದರು.
ಚೆನ್ ಎದುರು ಲವ್ಲಿನಾ ಅವರಿಗೆ ಇದು ಎರಡನೇ ಗೆಲುವು. ಟೋಕಿಯೊ ಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ಇದೇ ಬಾಕ್ಸರ್ ಎದುರು ಅವರು ಜಯ ಸಾಧಿಸಿದ್ದರು.
ಭಾರತದ ಬಾಕ್ಸರ್‌ಗೆ ಮುಂದಿನ ಬೌಟ್‌ನಲ್ಲಿ ಮೂರು ಬಾರಿಯ ಇಂಗ್ಲೆಂಡ್ ಚಾಂಪಿಯನ್ ಆಗಿರುವ ಸಿಂಡಿ ಎನ್‌ಗಾಂಬಾ ಸವಾಲು ಎದುರಾಗಿದೆ. ಶಿಕ್ಷಾ (54 ಕೆಜಿ), ಮನೀಷಾ (57 ಕೆಜಿ), ಅಂಕುಶಿತಾ (66 ಕೆಜಿ) ಮತ್ತು ನಂದಿನಿ (81 ಕೆಜಿ) ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.
2019ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಒಲಿದಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.