ಭಾನುವಾರ, ಆಗಸ್ಟ್ 14, 2022
20 °C

ವಿಶ್ವ ಈಜು: ಸೆಮಿಫೈನಲ್ ತಲುಪ‌ಲು ಸಜನ್ ವಿಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಸಜನ್ ಪ್ರಕಾಶ್‌ ಅವರು ಫಿನಾ ವಿಶ್ವ ಈಜು ಚಾಂಪಿಯನ್‌ಷಿಪ್‌ನ 200 ಮೀಟರ್‌ ಬಟರ್‌ಫ್ಲೈ ವಿಭಾಗದಲ್ಲಿ ಸೆಮಿಫೈನಲ್ ತಲುಪಲು ವಿಫಲರಾದರು.

ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಹೀಟ್‌ನಲ್ಲಿ ಅವರು 1 ನಿಮಿಷ 58.67 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇಲ್ಲಿ ಅವರು ಎಂಟನೆ ಸ್ಥಾನ ಗಳಿಸಿದರು. ಅಗ್ರ ಐದು ಸ್ಥಾನ ಗಳಿಸಿದವರು ಸೆಮಿಫೈನಲ್ಸ್‌ಗೆ ಮುಂದುವರಿದರು.

ಎರಡು ಬಾರಿಯ ಒಲಿಂಪಿಯನ್‌, 28 ವರ್ಷದ ಸಜನ್‌, 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಒಟ್ಟಾರೆ 25ನೇ ಸ್ಥಾನ ಗಳಿಸಿದರು. ಈ ವಿಭಾಗದಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 1 ನಿ. 56.48 ಸೆಕೆಂಡು ಆಗಿದೆ.

ಪುರುಷರ 800 ಮೀ. ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್‌ 23ನೇ ಸ್ಥಾನ ಗಳಿಸಿದರು. ಈ ವಿಭಾಗದ ಹೀಟ್‌ನಲ್ಲಿ 8 ನಿ. 15.96 ಸೆಕೆಂಡಿನಲ್ಲಿ ಗುರಿ ಮುಟ್ಟಿದ ಅವರು ಫೈನಲ್‌ಗೇರಲು ವಿಫಲರಾದರು. ಕಳೆದ ವರ್ಷ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ 8 ನಿ. 8.32 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು