ಬಾಲಿ: ಭಾರತದ ಕಿದಂಬಿ ಶ್ರೀಕಾಂತ್ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ನಲ್ಲಿ ಸೋತು ಹೊರಬಿದ್ದರು.

ಶುಕ್ರವಾರ ನಡೆದ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಶ್ರೀಕಾಂತ್ 19–21, 14–21 ರಿಂದ ಮಲೇಷ್ಯಾನದ ಲೀ ಝಿಲ್ ಜಿಯಾ ವಿರುದ್ಧ ಸೋತರು. 37 ನಿಮಿಷ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಶರಣಾದರು.

ಈ ಋತುವಿನಲ್ಲಿ ಶ್ರೀಕಾಂತ್ ಅವರು ಲೀ ಎದುರು ಎರಡನೇ ಬಾರಿ ಸೋತಿದ್ದಾರೆ. ಈಚೆಗೆ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಯೂ ಶ್ರೀಕಾಂತ್ ಲೀ ಎದುರು ಪರಾಭವಗೊಂಡಿದ್ದರು.

ಪಂದ್ಯದ ಮೊದಲ ಗೇಮ್ನಲ್ಲಿ ಶ್ರೀಕಾಂತ್ ಆರಂಭದಲ್ಲಿಯೇ 0–3ರ ಹಿನ್ನಡೆ ಅನುಭವಿಸಿದರು. ಆದರೆ ಪುಟಿದೆದ್ದ ಅವರು 9–8ರ ಮುನ್ನಡೆ ಸಾಧಿಸಿದರು. ಅರ್ಧವಿರಾಮದ ವೇಳೆಗೆ ಲೀ 11–9ರ ಮುನ್ನಡೆ ಸಾಧಿಸಿದರು. ನಂತರದ ಆಟ ತುರುಸಿನಿಂದ ಕೂಡಿತ್ತು. ಸತತ ಪಾಯಿಂಟ್ಗಳೊಂದಿಗೆ ಶ್ರೀಕಾಂತ್ 17–15ರ ಮುನ್ನಡೆ ಗಳಿಸಿದ್ದರು. ಆದರೆ ಲೀ ಚುರುಕಿನ ಆಟದ ಮೂಲಕ ಮೇಲುಗೈ ಸಾಧಿಸಿದರು.

ಎರಡನೇ ಗೇಮ್ನಲ್ಲಿ ಶ್ರೀಕಾಂತ್ 7–3ರ ಮುನ್ನಡೆ ಸಾಧಿಸಿ, ತಿರುಗೇಟು ನೀಡುವತ್ತ ಹೆಜ್ಜೆಯಿಟ್ಟಿದ್ದವು. ಈ ಹಂತದಲ್ಲಿ ಲೀ ಮತ್ತೆ ತಿರುಗೇಟು ಕೊಟ್ಟರು. ಶ್ರೀಕಾಂತ್ಗೆ ಕಠಿಣ ಸವಾಲೊಡ್ಡಿದರು. 13–9ರ ಮುನ್ನಡೆ ಸಾಧಿಸುವಲ್ಲಿ ಲೀ ಯಶಸ್ವಿಯಾದರು. ಇದರ ನಂತರ ಶ್ರೀಕಾಂತ್ ಮಂಕಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.