ಭಾನುವಾರ, ಮೇ 16, 2021
22 °C
ಹಿಸ್ಸಾರ್‌ನಲ್ಲಿ ಏಕಾಂತವಾಸ

ಕುಸ್ತಿಪಟು ಪೂಜಾಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ಹಿಸಾರ್‌: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತೆ, ಕುಸ್ತಿ ಕೋಚ್‌ ಆಗಿರುವ ಪೂಜಾ ಧಂಡಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸ್ವತಃ ಪೂಜಾ ಅವರೇ ಶುಕ್ರವಾರ ಇದನ್ನು ಖಚಿತಪಡಿಸಿದ್ದಾರೆ.

ಪೂಜಾ, 2018ರ ಕಾಮನ್‌ವೆಲ್ತ್‌ ಕ್ರೀಡೆಗಳಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಕೆಲವು ತಿಂಗಳ ನಂತರ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ರಜತ ಪದಕ ತಮ್ಮದಾಗಿಸಿಕೊಂಡಿದ್ದರು.

‘ನನಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಪಟ್ಟು ಪ್ರತ್ಯೇಕವಾಸದಲ್ಲಿರಬೇಕು. ನಾನೂ ಏಕಾಂತವಾಸದಲ್ಲಿದ್ದೇನೆ’ ಎಂದು ಹಿಸಾರ್‌ನವರಾದ ಪೂಜಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹರಿಯಾಣ ಕ್ರೀಡಾ ಇಲಾಖೆಯ ಕೋಚ್‌ ಆಗಿರುವ ಪೂಜಾ ಪ್ರಸ್ತುತ ಹಿಸಾರ್‌ನ ಮಹಾವೀರ ಸ್ಟೇಡಿಯಂನಲ್ಲಿ ತರಬೇತಿ ನೀಡುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.