ಗುರುವಾರ , ಏಪ್ರಿಲ್ 9, 2020
19 °C

ಅಮೆರಿಕಕ್ಕೆ ತೆರಳಿದ ಕುಸ್ತಿ ಕೋಚ್‌ ಆ್ಯಂಡ್ರ್ಯೂ ಕುಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮಹಿಳಾ ಕುಸ್ತಿ ತಂಡದ ವಿದೇಶಿ ಕೋಚ್‌ ಆ್ಯಂಡ್ರ್ಯೂ ಕುಕ್‌ ಅವರು ಶುಕ್ರವಾರ ಅಮೆರಿಕಕ್ಕೆ ತೆರಳಿದ್ದಾರೆ. ಕುಕ್‌ ಅವರು ಲಖನೌದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ನಾಲ್ಕು ಮಂದಿಗೆ ತರಬೇತಿ ನೀಡುತ್ತಿದ್ದರು.

ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಕೇಂದ್ರ ಕ್ರೀಡಾ ಸಚಿವಾಲಯವು ಯಾವುದೇ ಟೂರ್ನಿ, ಶಿಬಿರ ಮತ್ತು ಟ್ರಯಲ್ಸ್‌ಗಳನ್ನು ನಡೆಸದಂತೆ ಎಲ್ಲಾ ಫೆಡರೇಷನ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಕುಸ್ತಿಪಟುಗಳೆಲ್ಲಾ ಮನೆಗೆ ತೆರಳಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಭಾರತದ ಕುಸ್ತಿ ಕೋಚ್‌ ಕುಲದೀಪ್‌ ಮಲಿಕ್‌ ಅವರೂ ಸಾಯ್‌ ಕೇಂದ್ರ ತೊರೆದಿದ್ದಾರೆ.

‘ಕೊರೊನಾ ಭೀತಿಯಿಂದಾಗಿ ತರಬೇತಿ ಶಿಬಿರ ರದ್ದಾಗಿದೆ. ಸಾಯ್‌ ಕೇಂದ್ರದಲ್ಲಿ ಏಕಾಂಗಿಯಾಗಿರುವ ಬದಲು ತವರಿಗೆ ಹೋಗಿ ಕುಟುಂಬದ ಜೊತೆ ಸಮಯ ಕಳೆಯಬೇಕೆಂದು ನಿರ್ಧರಿಸಿದ್ದೇನೆ. ಹೀಗಾಗಿಯೇ ಅಮೆರಿಕಕ್ಕೆ ಹೋಗುತ್ತಿದ್ದೇನೆ’ ಎಂದು ಕುಕ್‌ ಹೇಳಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕುಟುಂಬದ ಜೊತೆ ಕಾಲ ಕಳೆಯುವುದು ಸೂಕ್ತ. ಶಿಬಿರ ರದ್ದಾಗಿರುವ ಕಾರಣ ಕುಕ್‌ ಅವರು ಕುಟುಂಬದ ಜೊತೆ ಕಾಲ ಕಳೆಯಲು ಬಯಸಿದ್ದಾರೆ. ಹೀಗಾಗಿ ಅವರಿಗೆ ರಜೆ ಮಂಜೂರು ಮಾಡಿದ್ದೇವೆ’ ಎಂದು ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು