ಯೂತ್‌ ಅಥ್ಲೆಟಿಕ್‌: ಓಟದಲ್ಲಿ ಪ್ರಿಯಾ ದಾಖಲೆ

7

ಯೂತ್‌ ಅಥ್ಲೆಟಿಕ್‌: ಓಟದಲ್ಲಿ ಪ್ರಿಯಾ ದಾಖಲೆ

Published:
Updated:
Prajavani

ಮೈಸೂರು: ಬೆಂಗಳೂರಿನ ಅರ್ಜುನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌ನ ಪ್ರಿಯಾ ಎಚ್‌.ಮೋಹನ್ ಅವರು ರಾಜ್ಯ ಯೂತ್‌ (18 ವರ್ಷ ವಯಸ್ಸಿನೊಳಗಿನವರು) ಅಥ್ಲೆಟಿಕ್ಸ್‌ನಲ್ಲಿ ಬಾಲಕಿಯರ 200 ಮೀಟರ್ಸ್‌ ಓಟದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಕೂಟದಲ್ಲಿ ಅವರು 24.70 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಎಂ.ಆರ್‌.ಪೂವಮ್ಮ (24.8 ಸೆ., 2007 ರಲ್ಲಿ) ಮತ್ತು ನಿರುಪಮಾ ಸುಂದರರಾಜ್‌ (24.8 ಸೆ., 2009 ರಲ್ಲಿ) ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದರು.

ಫಲಿತಾಂಶ: ಬಾಲಕರ ವಿಭಾಗ: 200 ಮೀ. ಓಟ: ವಿ.ಎ.ಶಶಿಕಾಂತ್ (ಬೆಂಗಳೂರು ಉತ್ತರ)–1, ಮಹಾಂತೇಶ್‌ (ಆಳ್ವಾಸ್‌)–2, ಮಲಿಕ್‌ ರೇಖನ್ (ಡಿವೈಇಎಸ್‌, ಬೆಂಗಳೂರು)–3. ಕಾಲ: 21.60 ಸೆ.

3000 ಮೀ. ಓಟ: ವೈಭವ್‌ ಎಂ.ಪಾಟೀಲ (ಬೆಂಗಳೂರು ಉತ್ತರ)–1, ಎಚ್‌.ಎಂ.ಸತೀಶ್ (ಆಳ್ವಾಸ್‌)–2, ಸಚಿನ್‌ ಬಸವರಾಜ್‌ (ಧಾರವಾಡ)–3. ಕಾಲ: 9 ನಿ.26.9 ಸೆ.

800 ಮೀ. ಓಟ: ಕೆ.ಸೂರ್ಯ (ಬೆಂಗಳೂರು ಉತ್ತರ)–1, ತುಷಾರ್‌ (ಬೆಳಗಾವಿ)–2, ಆರ್ಯನ್‌ ಸಿಂಘಾನಿಯಾ (ಅರ್ಜುನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌, ಬೆಂಗಳೂರು)–3. ಕಾಲ: 2 ನಿ.01.4 ಸೆ.

ಬಾಲಕಿಯರ ವಿಭಾಗ: 200 ಮೀ. ಓಟ: ಪ್ರಿಯಾ ಎಚ್‌.ಮೋಹನ್ (ಅರ್ಜುನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌, ಬೆಂಗಳೂರು)–1, ಪಿ.ಕೆ.ನೀತಾ (ಡಿವೈಇಎಸ್, ಬೆಂಗಳೂರು)–2, ಕೀರ್ತನಾ (ಉಡುಪಿ)–3. ಕಾಲ: 24.70 ಸೆ.

800 ಮೀ. ಓಟ: ಶ್ರಾವಣಿ ಭಾಟೆ (ಬೆಳಗಾವಿ)–1, ಎಸ್‌.ಕಾವ್ಯಾ (ಬಳ್ಳಾರಿ)–2, ವೈ.ಮೇಘನಾ (ಮೈಸೂರು)–3. ಕಾಲ: 2 ನಿ.32.6 ಸೆ.

3000 ಮೀ. ಓಟ: ಕೆ.ಬಿ.ಹರ್ಷಿತಾ (ಎಸ್‌ಎಐ, ಬೆಂಗಳೂರು)–1, ಶ್ರುತಿ ನಾರಾಯಣ್ (ಬೆಳಗಾವಿ)–2, ಮಂಜುಳಾ ರಂಗಪ್ಪ ರಾಥೋಡ್‌ (ಕೊಪ್ಪಳ)–3. ಕಾಲ: 11 ನಿ.16.9 ಸೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !