ನವದೆಹಲಿ: ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಬಿಜೆಪಿಯ ಅನಿಲ್ ಜೈನ್ ಆಯ್ಕೆಯಾಗಿದ್ದಾರೆ. ಭಾನುವಾರ ಇಲ್ಲಿ ನಡೆದ ರಾಷ್ಟ್ರೀಯಫೆಡರೇಷನ್‌ನ ವಾರ್ಷಿಕ ಸಾಮಾನ್ಯಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಧೂಪಿಯಾ ಆಯ್ಕೆಯಾದರು.
ಭಾರತ ಡೇವಿಸ್ ಕಪ್ ತಂಡದ ನಾಯಕ ರೋಹಿತ್ ರಾಜ್‌ಪಾಲ್ ಅವರು ನಾಲ್ಕು ವರ್ಷಗಳ ಅವಧಿಗೆ (2024ರವರೆಗೆ) ಖಜಾಂಚಿಯಾಗಿ ಆಯ್ಕೆಯಾದರು. ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯು ಅವಿರೋಧವಾಗಿ ನಡೆಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಕ್ಷಣಗಳಲ್ಲಿ ದೆಹಲಿಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದಾಗಿ ಅನಿಲ್ ಜೈನ್ ಘೋಷಿಸಿದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷ: ಅನಿಲ್ ಜೈನ್, ಪ್ರಧಾನ ಕಾರ್ಯದರ್ಶಿ: ಅನಿಲ್ ಧೂಪಿಯಾ, ಖಜಾಂಚಿ: ರೋಹಿತ್ ರಾಜ್‌ಪಾಲ್. ಜಂಟಿ ಕಾರ್ಯದರ್ಶಿಗಳು: ಸುಂದರ್ ಅಯ್ಯರ್, ಪ್ರೇಮ್ ಕುಮಾರ್ ಕರ್ರಾ, ಸುಮನ್ ಕಪೂರ್ ಮತ್ತು ರಕ್ತಿಮ್ ಸೈಕಿಯಾ. ಉಪಾಧ್ಯಕ್ಷರು: ಹೀರೊನ್ಮಯ್ ಚಟರ್ಜಿ, ಚಿಂತನ್ ಎನ್.ಪಾರೀಖ್, ನವನೀತ್ ಸೆಹಗಲ್, ಭರತ್ ಎನ್. ಓಜಾ, ಸಿ.ಎಸ್.ಸುಂದರ್ ರಾಜು, ವಿಜಯ್ ಅಮೃತರಾಜ್ ಮತ್ತು ರಾಜನ್ ಕಶ್ಯಪ್.
ಕಾರ್ಯಕಾರಿ ಸಮಿತಿ ಸದಸ್ಯರು: ಅಖೌರಿ ಬಿ.ಪ್ರಸಾದ್, ಅನಿಲ್ ಮಹಾಜನ್, ಅಂಕುಶ್ ದತ್ತ, ಅಶೋಕ್ ಕುಮಾರ್, ಗುರುಚರಣ್ ಸಿಂಗ್ ಹೋರಾ, ಕ್ಯಾಪ್ಟನ್ ಮೂರ್ತಿ ಗುಪ್ತಾ ಮತ್ತು ಥಾಮಸ್ ಪಾಲ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.