ಸೋಮವಾರ, ಜೂನ್ 21, 2021
30 °C

ಟೆನಿಸ್‌ ಟೂರ್ನಿ: ಅಂಕಿತಾಗೆ ಡಬಲ್ಸ್‌ ಗರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೊಂಥಾಬುರಿ, ಥಾಯ್ಲೆಂಡ್‌: ಭಾರತದ ಅಂಕಿತಾ ರೈನಾ ಅವರು ಇಲ್ಲಿ ನಡೆದ ನೊಂಥಾಬುರಿ ಐಟಿಎಫ್‌ ಟೆನಿಸ್‌ ಟೂರ್ನಿಯ ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಫೈನಲ್‌ನಲ್ಲಿ ಅಂಕಿತಾ ಮತ್ತು ಡೆನ್ಮಾರ್ಕ್‌ನ ಬಿಬಿಯಾನೆ ಸ್ಕೂಫ್ಸ್‌ ಜೋಡಿ 6–2, 3–6, 10–7ರಲ್ಲಿ ಮಿಯಾಬಿ ಇನೊವ್ ಮತ್ತು ಜಿಯಾ ಕ್ವಿ ಕಾಂಗ್‌ ಅವರನ್ನು ಮಣಿಸಿತು.

ಅಂಕಿತಾ ಅವರು ಹೋದ ವಾರ ಥಾಯ್ಲೆಂಡ್‌ನಲ್ಲೇ ನಡೆದಿದ್ದ ಟೂರ್ನಿಯ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

‘ಬಿಬಿಯಾನೊ ಅಂಗಳದಲ್ಲಿ ಸದಾ ಲವಲವಿಕೆಯಿಂದ ಇರುತ್ತಾರೆ. ಪ್ರತಿ ಹಂತದಲ್ಲೂ ನನ್ನನ್ನು ಹುರಿದುಂಬಿಸುತ್ತಾರೆ. ಅವರ ಜೊತೆ ಉತ್ತಮ ಹೊಂದಾಣಿಕೆಯೂ ಇದೆ. ಹೀಗಾಗಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಮುಂದಿನ ಟೂರ್ನಿಗಳಲ್ಲೂ ಇದೇ ರೀತಿ ಆಡಿ ಪ್ರಶಸ್ತಿ ಜಯಿಸಲು ಪ್ರಯತ್ನಿಸುತ್ತೇವೆ’ ಎಂದು ಅಂಕಿತಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು