ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ಸಿಂಧು, ಸೈನಾ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಮೀರ್‌ ವರ್ಮಾಗೆ ಜಯ; ಶ್ರೀಕಾಂತ್‌ಗೆ ಆಘಾತ
Last Updated 24 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ವುಹಾನ್ (ಪಿಟಿಐ): ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಪಿ.ವಿ.ಸಿಂಧು ಜಪಾನ್‌ನ ಸಯಾಕ ಟಕಹಾಶಿ ಅವರನ್ನು 21–14 21–7 ರಿಂದ ಮಣಿಸಿದರೆ, ಸೈನಾ ‌ಚೀನಾದ ಹಾನ್‌ ಯೂ ವಿರುದ್ಧ 12–21, 21–11, 21–17ರಿಂದ ಗೆದ್ದರು.

ಆಕರ್ಷಕ ಸರ್ವ್‌ ಮತ್ತು ಡ್ರಾಪ್ ಶಾಟ್‌ಗಳಿಂದ ಗಮನ ಸೆಳೆದ ಸಿಂಧು, ಆರಂಭದಿಂದಲೂ ಪ್ರಾಬಲ್ಯ ಮೆರೆದರು. ಕೇವಲ 28 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡು ಎರಡನೇ ಸುತ್ತಿಗೆ ಪ್ರವೇಶ ಪಡೆದರು. ಮುಂದಿನ ಹಂತದಲ್ಲಿ ಇಂಡೊನೇಷ್ಯಾದಚೊಯಿರುನ್ನಿಸಾ ವಿರುದ್ಧ ಸೆಣಸಲಿದ್ದಾರೆ.

ಸೈನಾಗೆ ಪ್ರಯಾಸದ ಗೆಲುವು: ವಿಶ್ವದ ಒಂಬತ್ತನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್, ಆರಂಭದ ಗೇಮ್‌ ಅನ್ನು ಎದುರಾಳಿ ಹಾನ್‌ ಯೂ ಅವರಿಗೆ ಒಪ್ಪಿಸಿದರು. 12–21ರಿಂದ ಹಿನ್ನಡೆ ಅನುಭವಿಸಿ ಸೈನಾ ಪಂದ್ಯವನ್ನು ಕೈ ಚೆಲ್ಲುವ ಹಂತಕ್ಕೆ ತಲುಪಿದ್ದರು. ಆದರೆ, ಎರಡನೇ ಗೇಮ್‌ನಲ್ಲಿ ತಿರುಗೇಟು ಕೊಟ್ಟ ಸೈನಾ, 21–11ರಿಂದ ಮುನ್ನಡೆ ಪಡೆದರು. ಮೂರನೇ ಗೇಮ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈ‍ಪೋಟಿ ಎದುರಾಯಿತು. ಆದರೂ, 21–17ರಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ದಕ್ಷಿಣ ಕೊರಿಯಾದ ಕಿಮ್‌ ಗ ಯುನ್ ವಿರುದ್ಧ ಸೆಣಸಲಿದ್ದಾರೆ.

ಸಮೀರ್‌ ವರ್ಮಾಗೆ ಜಯ: ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ ಅವರು ಜಪಾನ್‌ನ ಕಜುಮಸಾ ಸಕಾಯ್‌ ಅವರನ್ನು 21–13, 17–21, 21–18ರಿಂದ ಮಣಿಸಿ ಮುಂದಿನ ಸುತ್ತಿಗೆ‍ಪ್ರವೇಶ ಪಡೆದರು. ಎರಡನೇ ಗೇಮ್‌ ಅನ್ನು ಕೈ ಚೆಲ್ಲಿದ ವರ್ಮಾ, ಮೂರನೇ ಗೇಮ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. 67 ನಿಮಿಷಗಳ ಪೈಪೋಟಿಯ ಆಟ ಅಭಿಮಾನಿಗಳ ಗಮನ ಸೆಳೆಯಿತು. ಎರಡನೇ ಸುತ್ತಿನಲ್ಲಿ ಹಾಂಕಾಂಗ್‌ನಆಂಗಸ್ಎನ್‌ ಕಾ ಲಾಂಗ್ ವಿರುದ್ಧ ಸೆಣಸಲಿದ್ದಾರೆ.

ಶ್ರೀಕಾಂತ್‌ಗೆ ಆಘಾತ: ಕಿದಂಬಿ ಶ್ರೀಕಾಂತ್‌ 16–21, 20–22 ರಲ್ಲಿ ಇಂಡೊನೇಷ್ಯಾದ ಶ್ರೇಸರ್‌ಹಿರೇನ್ ರುಸ್ತಾವಿಟೋ ಅವರಿಗೆ ಮಣಿದರು. ಕೇವಲ 44 ನಿಮಿಷಗಳಲ್ಲಿ ಶ್ರೀಕಾಂತ್‌ ಪಂದ್ಯವನ್ನು ಎದುರಾಳಿಗೆ ಒಪ್ಪಿಸಿದರು.

ಡಬಲ್ಸ್‌ನಲ್ಲಿ ನಿರಾಸೆ: ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರ್ ಶ್ಲೋಕ್ ಅವರು ಚೀನಾದ ಜಿತಾಂಹ್‌ ಹಿ ಮತ್ತು ತಾನ್‌ ಕಿಯಾಂಗ್‌ ವಿರುದ್ಧ 18–21, 15–21ರಿಂದ ಸೋತರು. ಮಹಿಳೆಯರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಜೊಂಗ್‌ಕೊಲ್ಪನ್ ಕಿತಿತಾರಕುಲ್‌– ರಾವಿಂದಾ ಪ್ರಜೋಂಗ್ಜಾಯ್‌ ಜೋಡಿಗೆಮೇಘನಾ ಜಕ್ಕಂಪುಡಿ–ಪೂರ್ವಿಶಾ ಎಸ್‌.ಶ್ಯಾಮ್‌ ಜೋಡಿ 21–13, 21–16ರಿಂದ ಮಣಿದರೆ, ಪೂಜಾ ದಂಡಾ–ಸಂಜನಾ ಸಂತೋಷ್‌ ಜೋಡಿ ಶ್ರೀಲಂಕಾದ ತಿಲಿನಿ ಪ್ರಮೋದಿಕಾ– ಕವಿದಿ ಸಿರಿಮನ್ನಾಗಿ ಅವರಿಗೆ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT