ಶುಕ್ರವಾರ, ಡಿಸೆಂಬರ್ 13, 2019
26 °C

ಎಟಿಪಿ ಫೈನಲ್ಸ್‌: ಪ್ರಶಸ್ತಿ ಗೆದ್ದ 4ನೇ ಕಿರಿಯ ಆಟಗಾರ ಸಿಸಿಪಸ್‌

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಲಂಡನ್‌: ಆಸ್ಟ್ರೀಯಾದ ಡೊಮಿನಿಕ್‌ ಥೀಮ್‌ ಎದುರು ಗೆಲುವು ಸಾಧಿಸಿದ ಗ್ರೀಸ್‌ ಆಟಗಾರ ಸ್ಟೆಫಾನೊಸ್‌ ಸಿಸಿಪಸ್‌, ಈ ಬಾರಿಯ ಎಟಿಪಿ ಫೈನಲ್ಸ್‌ ಪ್ರಶಸ್ತಿಗೆ ಮುತ್ತಿಕ್ಕಿದರು.

21 ವರ್ಷದ ಸಿಸಿಪಸ್‌, ಥೀಮ್‌ ಅವರನ್ನು 6–7, 6–2, 6–4 ಅಂತರದಿಂದ ಮಣಿಸಿದರು. ಮೊದಲ ಸೆಟ್‌ನಲ್ಲಿ ವೈಫಲ್ಯ ಅನುಭವಿಸಿದರೂ, ಬಳಿಕ ಅತ್ಯುತ್ತಮ ಆಟವಾಡಿದ ಸಿಸಿಪಸ್‌ ಮೊದಲ ಯತ್ನದಲ್ಲೇ ಈ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ ಎನಿಸಿದರು.

2001ರಲ್ಲಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾದ ಲೀಟನ್‌ ಹೆವಿಟ್‌ ನಂತರ ಈ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.

ಅಮೆರಿಕದ ಜಿಮ್‌ ಕೊರಿಯರ್‌(2001) ಬಳಿಕ ಮೊದಲ ಯತ್ನದಲ್ಲೇ ಫೈನಲ್‌ ತಲುಪಿದ ಆಟಗಾರ ಎಂಬ ಖ್ಯಾತಿಯೂ ಅವರದಾಯಿತು.

ಪ್ರತಿಕ್ರಿಯಿಸಿ (+)