ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲೀ ಜೀನ್ ಕಪ್‌ ಟೆನಿಸ್‌: ಭಾರತಕ್ಕೆ ಮೂರನೇ ಜಯ

Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡ, ಚೀನಾದ ಚಾಂಗ್ಶಾದಲ್ಲಿ ನಡೆಯುತ್ತಿರುವ ಬಿಲ್ಲೀ ಜೀನ್ ಕಿಂಗ್‌ ಕಪ್‌ ಟೆನಿಸ್‌ ಟೂರ್ನಿಯ ಏಷ್ಯಾ ಒಷಾನಿಯಾ ಒಂದನೇ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 2–1 ರಿಂದ ಸೋಲಿಸಿತು. ಇದು ಭಾರತಕ್ಕೆ ಮೂರನೇ ಜಯ. ಮೂರು ಗೆಲುವು ಒಂದು ಸೋಲಿನೊಡನೆ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದೆ.

ವಿಶ್ವ ಕ್ರಮಾಂಕದಲ್ಲಿ 379ನೇ ಸ್ಥಾನದಲ್ಲಿರುವ ರುತುಜಾ ಭೋಸಲೆ 6–2, 6–2 ರಿಂದ ಸೊಹ್ಯುನ್ ಪಾರ್ಕ್ ಅವರನ್ನು ಸೋಲಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಅಂಕಿತಾ ರೈನಾ 2–6, 3–6 ರಲ್ಲಿ ಸುಜಿಯೊಂಗ್ ಜಂಗ್ ಎದುರು ಸೋತರು. ಡಬಲ್ಸ್‌ನಲ್ಲಿ ಅಂಕಿತಾ–ಪ್ರಾರ್ಥನ ತೊಂಬರೆ 6–4, 6–4 ರಿಂದ ಪಾರ್ಕ್‌– ಡಬಿನ್ ಕಿಮ್‌ ಜೋಡಿಯನ್ನು ಸೋಲಿಸಿತು.

ಭಾರತ ಶನಿವಾರ ನಡೆಯುವ ಗುಂಪಿನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. ನ್ಯೂಜಿಲೆಂಡ್ ತಂಡ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಭಾರತ ಇದಕ್ಕೆ ಮೊದಲು ಪೆಸಿಫಿಕ್ ಒಷಾನಿಯಾ (3–0), ಚೀನಾ ತೈಪಿ (2–1) ವಿರುದ್ಧ ಜಯಗಳಿಸಿತ್ತು. ಆದರೆ ಚೀನಾಕ್ಕೆ (0–3) ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT