ಶುಕ್ರವಾರ, ಅಕ್ಟೋಬರ್ 22, 2021
22 °C
ಡಬಲ್ಸ್ ವಿಭಾಗದಲ್ಲಿ ಎಡವಿದ ರೋಹನ್ ಬೋಪಣ್ಣ– ರಾಮ್‌ಕುಮಾರ್

ಡೇವಿಸ್‌ ಕಪ್: ಭಾರತಕ್ಕೆ ಸೋಲು- ಎಡವಿದ ರೋಹನ್ ಬೋಪಣ್ಣ ಹಾಗೂ ರಾಮ್‌ ಕುಮಾರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಎಸ್ಪೊ, ಫಿನ್‌ಲೆಂಡ್: ಅನುಭವಿ ರೋಹನ್ ಬೋಪಣ್ಣ ಹಾಗೂ ರಾಮ್‌ಕುಮಾರ್ ರಾಮನಾಥನ್ ಅವರು ಡಬಲ್ಸ್‌ನಲ್ಲಿ ನಿರಾಸೆ ಅನುಭವಿಸಿದರು. ಇದರೊಂದಿಗೆ ಭಾರತ ತಂಡವು ಡೇವಿಸ್ ಕಪ್ ಟೂರ್ನಿಯ ವಿಶ್ವ ಗುಂಪು ಒಂದರ ಫಿನ್‌ಲೆಂಡ್‌ ಎದುರಿನ ಪಂದ್ಯದಲ್ಲಿ 0–3ರಿಂದ ಸೋಲು ಅನುಭವಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿಯು 6-7(2), 6-7(2)ರಿಂದ ಹೆನ್ರಿ ಕೊಂಟಿನೆನ್‌ ಮತ್ತು ಹ್ಯಾರಿ ಹೆಲಿವಿವರಾ ಎದುರು ಎಡವಿದರು.

ಭಾರತ ತಂಡದ ಆಟವಾಡದ ನಾಯಕ ರೋಹಿತ್ ರಾಜ್‌ಪಾಲ್‌ ಅವರು ಪಂದ್ಯ ಆರಂಭವಾಗುವ ಹಂತದಲ್ಲಿ ದಿವಿಜ್‌ ಅವರ ಬದಲಿಗೆ ರಾಮಕುಮಾರ್ ಅವರನ್ನು ಬೋಪಣ್ಣ ಅವರಿಗೆ ಜೊತೆಗಾರನನ್ನಾಗಿ ಮಾಡಿದರು. ಆದರೆ ಇದು ಫಲ ನೀಡಲಿಲ್ಲ.

ಪ್ರಜ್ಞೇಶ್ ಗುಣೇಶ್ವರನ್ ಹಾಗೂ ರಾಮ್‌ಕುಮಾರ್ ರಾಮನಾಥನ್ ಅವರು ತಮ್ಮ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಶುಕ್ರವಾರ ಸೋಲು ಅನುಭವಿಸಿದ್ದರು.

ಇನ್ನು ರಿವರ್ಸ್‌ ಸಿಂಗಲ್ಸ್ ಪಂದ್ಯಗಳಿದ್ದು, ಕೇವಲ ಔಪಚಾರಿಕ ಎನಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು