ಮಂಗಳವಾರ, ಅಕ್ಟೋಬರ್ 20, 2020
25 °C

ಕೋವಿಡ್‌ ಸೋಂಕು: ಫ್ರೆಂಚ್‌ ಓಪನ್‌ ಟೆನಿಸ್‌ ಅರ್ಹತಾ ಸುತ್ತಿನಿಂದ ಐವರು ಹೊರಕ್ಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಆಡಲಿದ್ದ ಇಬ್ಬರು ಆಟಗಾರರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ ಎಂದು ಫ್ರೆಂಚ್‌ ಟೆನಿಸ್‌ ಫೆಡರೇಷನ್ (ಎಫ್‌ಎಫ್‌ಟಿ)‌ ಹೇಳಿದೆ. ಒಬ್ಬ ತರಬೇತುದಾರನಿಗೂ ಸೋಂಕು ತಗುಲಿದ್ದು, ಅವರೊಂದಿಗೆ ಮೂವರು ಆಟಗಾರರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೆಂದು ಫೆಡರೇಷನ್ ತಿಳಿಸಿದೆ.

ಈ ಐದು ಆಟಗಾರರು ಏಳು ದಿನಗಳ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಅರ್ಹತಾ ಸುತ್ತಿನ ಪಂದ್ಯಗಳು ಸೋಮವಾರ ಆರಂಭವಾಗಿದ್ದು, ಈ ಐವರು ಪಾಲ್ಗೊಳ್ಳುವುದಿಲ್ಲ ಎಂದು ಎಫ್‌ಎಫ್‌ಟಿ ಭಾನುವಾರ ಮಾಹಿತಿ ನೀಡಿದೆ. ಇದೇ 27ರಿಂದ ಫ್ರೆಂಚ್‌ ಓಪನ್‌ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ.

ಕೋವಿಡ್‌ ಸೋಂಕಿತರ ಹೆಸರನ್ನು ಎಫ್‌ಎಫ್‌ಟಿ ಬಹಿರಂಗಪಡಿಸಿಲ್ಲ. ಆದರೆ ಕೋಚ್‌ ಪೀಟರ್‌ ಪೊಪೊವಿಚ್‌ ಹಾಗೂ 114ನೇ ಕ್ರಮಾಂಕದ ಆಟಗಾರ ಡಾಮಿರ್ ಡಿಜುಮರ್‌ ಅವರು ಸೋಂಕಿತರಲ್ಲಿ ಸೇರಿದ್ದಾರೆ ಎಂದು ಕ್ರೀಡಾ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಗುರುವಾರದವರೆಗೆ ಅಂದಾಜು 900 ಕೊರೊನಾ ವೈರಸ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಎಫ್‌ಎಫ್‌ಟಿ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು