ಪ್ಯಾರಿಸ್: ಜೆಕ್ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲೂ ಪಾರಮ್ಯ ಮೆರೆದಿದ್ದಾರೆ. ಶನಿವಾರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಅವರು, ಭಾನುವಾರ ತಮ್ಮದೇ ದೇಶದ ಕಟೆರಿನಾ ಸಿನಿಯಾಕೊವಾ ಜೊತೆಗೂಡಿ ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಫೈನಲ್ ಹಣಾಹಣಿಯಲ್ಲಿ ಜೆಕ್ ಆಟಗಾರ್ತಿಯರು 6-4, 6-2ರಿಂದ ಪೋಲೆಂಡ್‌ನ ಇಗಾ ಸ್ವಾಟೆಕ್ ಹಾಗೂ ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್ ಅವರನ್ನು ಪರಾಭವಗೊಳಿಸಿದರು.

ಕ್ರೆಚಿಕೊವಾ 2000 ಇಸ್ವಿಯ ಬಳಿಕ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮಹಿಳಾ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದ ಮೊದಲ ಆಟಗಾರ್ತಿ ಎನಿಸಿಕೊಂಡರು. 2000ರಲ್ಲಿ ಫ್ರಾನ್ಸ್‌ನ ಮೇರಿ ಪಿಯರ್ಸ್ ಈ ಶ್ರೇಯ ಗಳಿಸಿದ್ದರು.

25 ವರ್ಷದ ಕ್ರೆಚಿಕೊವಾ ಶನಿವಾರ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಮೂಲಕ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನ ಗಳಿಸಿದ್ದರು. ಸೋಮವಾರ ಪ್ರಕಟವಾಗುವ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ಅವರು ಅಗ್ರಸ್ಥಾನಕ್ಕೇರಲಿದ್ದಾರೆ.

2020ರ ಆವೃತ್ತಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್ ಸ್ವಾಟೆಕ್ ಮತ್ತು ಮ್ಯಾಟೆಕ್ ಸ್ಯಾಂಡ್ಸ್ ಮೂರನೇ ಬಾರಿ ಒಟ್ಟಾಗಿ ಕಣಕ್ಕಿಳಿದಿದ್ದರು. ಸಿನಿಯಾಕೊವಾ ಅವರ ವೇಗದ ಚಲನೆ ಹಾಗೂ ಕ್ರೆಚಿಕೊವಾ ಅವರ ಪ್ರಬಲ ಬೇಸ್‌ಲೈನ್ ಹೊಡೆತಗಳ ಮುಂದೆ ಅವರ ಆಟ ನಡೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.