ಗುರುವಾರ , ಅಕ್ಟೋಬರ್ 22, 2020
23 °C

ನವೆಂಬರ್‌ 16ರಿಂದ ವಯೋವರ್ಗದ ಟೆನಿಸ್‌ ಟೂರ್ನಿಗಳ ಆಯೋಜನೆ: ಎಐಟಿಎ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ದೇಶದಲ್ಲಿ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಟೆನಿಸ್‌ ಟೂರ್ನಿಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ನವೆಂಬರ್‌ 16ರಿಂದ ದೇಶಿ ಟೂರ್ನಿಗಳಿಗೆ ಚಾಲನೆ ನೀಡಲಾಗುವುದು ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆಯು (ಎಐಟಿಎ) ಸೋಮವಾರ ತಿಳಿಸಿದೆ.

ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾದ ಕಾರಣ ಮಾರ್ಚ್‌ 16ರಿಂದ ದೇಶದಾದ್ಯಂತ ಟೆನಿಸ್‌ ಸೇರಿ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಆರಂಭದಲ್ಲಿ 12, 14 ಹಾಗೂ 16 ವರ್ಷದೊಳಗಿನವರ ಟೂರ್ನಿಗಳನ್ನು ಆಯೋಜಿಸಲಾಗುವುದು ಎಂದು ಎಐಟಿಎ ಹೇಳಿದೆ. ಟೂರ್ನಿಯ ಅವಧಿಯನ್ನು ಮೂರು ದಿನಗಳಿಗೆ ಸೀಮಿತಗೊಳಿಸಲಾಗುವುದು. ಟೂರ್ನಿಯೊಂದರಲ್ಲಿ 32 ಪಂದ್ಯಗಳಿಗೆ ಅವಕಾಶವಿದೆ.

‘ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ನವೆಂಬರ್‌ 16ರೊಳಗೆ ಟೆನಿಸ್‌ ಟೂರ್ನಿಗಳನ್ನು ಪುನರಾರಂಭಿಸಲು ಎಲ್ಲ ಅಂಗಸಂಸ್ಥೆಗಳಿಗೆ ತಿಳಿಸಲು  ವ್ಯವಸ್ಥಾಪನಾ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೂರ್ನಿ ನಡೆಯುವ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ‘ ಎಂದು ಎಐಟಿಎ ಹೇಳಿದೆ.

ಸಂಸ್ಥೆಯ ಪೂರ್ವಾನುಮತಿ ಇಲ್ಲದೆ ಸ್ವತಂತ್ರ ಘಟಕಗಳು ಯಾವುದೇ ಖಾಸಗಿ ಟೂರ್ನಿಗಳನ್ನು ಆಯೋಜಿಸಬಾರದು ಎಂದು ಎಐಟಿಎ ಎಚ್ಚರಿಕೆ ನೀಡಿದೆ. ಎಐಟಿಎ ಅಥವಾ ಅಂಗಸಂಸ್ಥೆಗಳ ಮಾನ್ಯತೆ ಇಲ್ಲದ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸಕೂಡದು ಎಂದು ಆಟಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಉಲ್ಲಂಘಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು