ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನಾ ಮದ್ದು: ಸ್ಪಿಯರ್ಸ್‌ಗೆ ನಿಷೇಧ

Last Updated 6 ಫೆಬ್ರುವರಿ 2020, 20:20 IST
ಅಕ್ಷರ ಗಾತ್ರ

ಪ್ಯಾರಿಸ್‌: ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಅಮೆರಿಕಾ ಟೆನಿಸ್‌ ಆಟಗಾರ್ತಿ ಅಬಿಗೈಲ್‌ ಸ್ಪಿಯರ್ಸ್‌ ಮೇಲೆ 22 ತಿಂಗಳುನಿಷೇಧ ಹೇರಲಾಗಿದೆ. ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಈ ವಿಷಯ ತಿಳಿಸಿದೆ. ಈ ಹಿಂದೆ ಅವರು ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಚಾಂಪಿಯನ್‌ ಆಗಿದ್ದರು.

38 ವರ್ಷದ ಸ್ಪಿಯರ್ಸ್, 2019ರ ಅಮೆರಿಕಾ ಓಪನ್‌ ಟೂರ್ನಿಯಲ್ಲಿ ನಿಷೇಧಿತ ಮದ್ದು ಸೇವಿಸಿದ್ದು ಸಾಬೀತಾಗಿದೆ.

ಅವರ ನಿಷೇಧ ಅವಧಿ 2019ರ ನವೆಂಬರ್‌ 7ರಿಂದಲೇ ಪೂರ್ವಾನ್ವಯಗೊಂಡಿದ್ದು, 2021ರ ಸೆಪ್ಟೆಂಬರ್‌ 6ಕ್ಕೆ ಅಂತ್ಯವಾಗಲಿದೆ.

2017ರಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಸ್ಪಿಯರ್ಸ್‌, ಕೊಲಂಬಿಯಾದ ಜುವಾನ್‌ ಕ್ಯಾಬಲ್‌ ಸೆಬಾಸ್ಟಿಯನ್‌ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ವೃತ್ತಿ ಜೀವನದಲ್ಲಿಅವರು 21 ಬಾರಿ ಡಬಲ್ಸ್‌ ವಿಭಾಗದ ಚಾಂಪಿಯನ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT