ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೋಪ್‌ ಟೆನಿಸ್‌ ಟೂರ್ನಿಗಳು: ರಫೆಲ್, ಜೊಕೊವಿಚ್‌ಗೆ ಕಠಿಣ ಪರೀಕ್ಷೆ

ಕಾಡುತ್ತಿರುವ ಗಾಯದ ಸಮಸ್ಯೆ
Last Updated 13 ಏಪ್ರಿಲ್ 2019, 17:47 IST
ಅಕ್ಷರ ಗಾತ್ರ

ಮಾಂಟೆ ಕಾರ್ಲೊ: ಯುರೋಪ್‌ನ ಆವೆಮಣ್ಣಿನ ಅಂಗಣಗಳಲ್ಲಿ ಭಾನುವಾರದಿಂದ ಟೆನಿಸ್ ರಿಂಗಣ. ಆದರೆ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ರಫೆಲ್ ನಡಾಲ್ ಮತ್ತು ನೊವಾಕ್‌ ಜೊಕೊವಿಚ್‌ ಈ ಟೂರ್ನಿಗಳಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ.

ಮಾಂಟೆ ಕಾರ್ಲೊ ಮಾಸ್ಟರ್ಸ್ ಮೂಲಕ ಭಾನುವಾರ ಈ ಋತುವಿನ ಟೂರ್ನಿಗಳು ಆರಂಭವಾಗಲಿವೆ. ರಫೆಲ್ ನಡಾಲ್ ಅವರು ಮಾಂಟೆ ಕಾರ್ಲೊ ಓಪನ್‌ನಲ್ಲಿ 11 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಈ ಬಾರಿ ಎಡ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ.

ಅನಾರೋಗ್ಯದಿಂದಾಗಿ ಜೊಕೊವಿಚ್‌ ಕಳೆದ ತಿಂಗಳು ನಡೆದಿದ್ದ ಇಂಡಿಯನಾ ವೆಲ್ಸ್‌ ಮತ್ತು ಮಿಯಾಮಿ ಮಾಸ್ಟರ್ಸ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತದಿಂದ ಹೊರಬಿದ್ದಿದ್ದರು. ಈ ನಡುವೆ ಎಟಿಪಿಯ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿರುವುದು ಕೂಡ ಅವರ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಿದೆ.

‘ಅಂಗಣದ ಹೊರಗೆ ಅನಗತ್ಯ ವಿವಾದಗಳಲ್ಲಿ ಸಿಲುಕಿರುವುದರಿಂದ ಆಟದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಇದರಿಂದ ಹೊರಬರಬೇಕಾದ ಅಗತ್ಯವಿದೆ’ ಎಂದು ಮಿಯಾಮಿ ಓಪನ್‌ನಿಂದ ಹೊರಬಿದ್ದ ನಂತರ ಜೊಕೊವಿಚ್‌ ಅವರು ಹೇಳಿದ್ದರು.

ಅಲೆಕ್ಸಾಂಡರ್ ಜ್ವೆರೆವ್‌ ಮೇಲೆಯೂ ಕಣ್ಣು: ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮೇಲೆ ಕೂಡ ಟೂರ್ನಿಯಲ್ಲಿ ಎಲ್ಲರ ಕಣ್ಣು ನೆಟ್ಟಿದೆ.

ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಅವರು ಕಳೆದ ತಿಂಗಳಲ್ಲಿ ನಡೆದಿದ್ದ ಅಕಪುಲ್ಕೊ ಓಪನ್‌ನ ಫೈನಲ್‌ನಲ್ಲಿ ನಿಕ್ ಕಿರ್ಗಿಯೋಸ್‌ಗೆ ಮಣಿದಿದ್ದರು. ಕಳೆದ ಬಾರಿಯ ಮಾಂಟೆ ಕಾರ್ಲೊ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಕೀ ನಿಶಿಕೋರಿ ವಿರುದ್ಧ ಸೋತಿದ್ದರು.

ಈ ಬಾರಿಯ ಟೂರ್ನಿಯಲ್ಲಿ ಆಸ್ಟ್ರಿಯಾದ ಡಾಮ್ನಿಕ್ ಥೀಮ್‌, ಜಪಾನ್‌ನ ಕೀ ನಿಶಿಕೋರಿ, ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌, ಅಮೆರಿಕದ ಜಾನ್‌ ಇಸ್ನೇರ್‌ ಮುಂತಾದವರು ಕೂಡ ಕಣದಲ್ಲಿದ್ದು ಟೆನಿಸ್ ಪ್ರಿಯರ ಕುತೂಹಲ ಕೆರಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT