ಬುಧವಾರ, ಜೂನ್ 29, 2022
27 °C

ಮಾಜಿ ಟೆನಿಸ್ ಚಾಂಪಿಯನ್ ಬೋರಿಸ್ ಬೆಕರ್‌ಗೆ ಜೈಲು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಲಂಡನ್: ದಿವಾಳಿ ಎಂದು ಘೋಷಣೆಯಾದ ನಂತರವೂ ಲಕ್ಷಾಂತರ ಪೌಂಡ್‌ಗಳ ಆಸ್ತಿಯನ್ನು ಬಚ್ಚಿಟ್ಟಿದ್ದಕ್ಕಾಗಿ ಲಂಡನ್ ನ್ಯಾಯಾಲಯವು ಶುಕ್ರವಾರ ಜರ್ಮನಿಯ ಮಾಜಿ ಟೆನಿಸ್ ಪಟು ಬೋರಿಸ್ ಬೆಕರ್ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.

ದಿವಾಳಿತನದ ವಿಚಾರಣೆ ಬಳಿಕವೂ ಬೆಕರ್, ಆಸ್ತಿಗಳನ್ನು ಬಹಿರಂಗಪಡಿಸದೆ ಮರೆಮಾಚಿದ್ದ ಆರೋಪದಡಿ ಬ್ರಿಟನ್‌ನ ದಿವಾಳಿತನ ಕಾಯಿದೆಯಡಿಯಲ್ಲಿ 4 ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಲಾಗಿತ್ತು.

54 ವರ್ಷ ವಯಸ್ಸಿನ ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಬೆಕರ್, 2017ರ ದಿವಾಳಿತನದ ನಂತರವೂ ತನ್ನ ಮಾಜಿ ಪತ್ನಿ ಬಾರ್ಬರಾ ಮತ್ತು ಪರಿತ್ಯಕ್ತ ಪತ್ನಿ ಶಾರ್ಲೆಲಿಗೆ ಹಣವನ್ನು ವರ್ಗಾಯಿಸುವ ಮೂಲಕ ತಪ್ಪೆಸಗಿದ್ದಾರೆ ಎಂದು ವಿಚಾರಣೆಯಲ್ಲಿ ಸಾಬೀತಾಗಿತ್ತು.

ಬೆಕರ್‌ಗೆ ಎರಡು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ಡೆಬೊರಾ ಟೇಲರ್ ಅವರು ‘ನಿಮ್ಮ ತಪ್ಪಿನ ಬಗ್ಗೆ ನೀವು ಪಶ್ಚಾತ್ತಾಪ ಅಥವಾ ಅಂಗೀಕಾರವನ್ನು ತೋರಿಸದಿರುವುದು ಗಮನಾರ್ಹವಾಗಿದೆ’ ಎಂದು ಹೇಳಿದ್ದಾರೆ.

ಬೆಕರ್‌ಗೆ ಶಿಕ್ಷೆ ಪ್ರಕಟಿಸುವ ವೇಳೆ ಪತ್ನಿ ಮತ್ತು ಮಗ ನ್ಯಾಯಾಲಯದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು