ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ಪರೀಕ್ಷೆಗೆ ಹಲವರು ಸಿದ್ಧ

ಫ್ರೆಂಚ್‌ ಓಪನ್‌ ಅರ್ಹತಾ ಸುತ್ತಿನ ಪಂದ್ಯಗಳು ಆರಂಭ
Last Updated 21 ಮೇ 2019, 18:52 IST
ಅಕ್ಷರ ಗಾತ್ರ

ಪ್ಯಾರಿಸ್‌: ಪ್ರತಿಷ್ಠಿತ ಫ್ರೆಂಚ್‌ ಓಪನ್‌ಗೆ ಕೆಲವೇ ದಿನಗಳುಬಾಕಿ ಇದ್ದು, ಯುವ ಮತ್ತು ಅನುಭವಿ ಆಟಗಾರರು ಅರ್ಹತಾ ಸುತ್ತಿನಲ್ಲಿ ಸೆಣಸಲು ವೇದಿಕೆ ಸಿದ್ಧವಾಗಿದೆ.

ಟೂರ್ನಿಯ ಮುಖ್ಯ ಸುತ್ತಿಗೆ ಪ್ರವೇಶ ಪಡೆಯಲು 16 ಸ್ಥಾನಗಳಿಗಾಗಿ 128 ಆಟಗಾರರು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಮಂಗಳವಾರದಿಂದ 96 ಮಹಿಳಾ ಸ್ಪರ್ಧಿಗಳು ಕೇವಲ 12 ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಡೆನಿಸ್‌ ಇಸ್ತೊಮಿನ್‌ ಹಾಗೂ ಡಸ್ಟಿನ್‌ ಬ್ರೌನ್‌ ಅವರು ಈ ಬಾರಿ ಅರ್ಹತಾ ಸುತ್ತು ದಾಟುವ ವಿಶ್ವಾಸದಲ್ಲಿದ್ದಾರೆ.

ಎಂಟು ವರ್ಷಗಳ ಹಿಂದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿದ್ದ ಸರ್ಬಿಯಾದ ವಿಕ್ಟರ್‌ ಟ್ರೊಯಿಕಿ ಹಾಗೂ ಸದ್ಯ 267ನೇ ಸ್ಥಾನ ಹೊಂದಿರುವಜರ್ಮನಿಯ ಕೆವಿನ್‌ ಕ್ರಾವಿಟ್ಜ್‌ ಮುಖ್ಯ ಸುತ್ತಿಗೆ ಪ್ರವೇಶಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಮಹಿಳಾ ಅರ್ಹತಾ ಸ್ಪರ್ಧಿಗಳಲ್ಲಿ ವಿಶ್ವ ಕ್ರಮಾಂದಲ್ಲಿ 129ನೇ ಸ್ಥಾನದಲ್ಲಿದ್ದ ಜೆಲೆನಾ ಡೊಕಿಕ್‌ ಹಾಗೂ ಸ್ವಿಟ್ಜರ್‌ಲೆಂಡ್‌ನ ಆಟಗಾರ್ತಿ ಟಿಮಿಯಾ ಬ್ಯಾಕ್‌ಸಿಂಜಿಕಿ ಇದ್ದು, ಪ್ರಧಾನ ಸುತ್ತಿಗೆ ಪ್ರವೇಶಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಫ್ರೆಂಚ್‌ ಓಪನ್‌ನ ಮುಖ್ಯ ಸುತ್ತಿನಲ್ಲಿ ಸೋತ ಆಟಗಾರನಿಗೆ ಈ ಬಾರಿ ₹ 31 ಲಕ್ಷ ನೀಡಲಾಗುತ್ತದೆ.ಈ ಮೊದಲು ₹ 4. 66 ಲಕ್ಷ ನೀಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT