ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಫೆಡರರ್‌ ಮಣಿಸಿದ ನಡಾಲ್‌ ಫೈನಲ್‌ ಪ್ರವೇಶ

ಭಾನುವಾರ, ಜೂನ್ 16, 2019
28 °C
ಬಾರ್ಟಿ–ವೊಂಡ್ರೊಸೊವಾ ಫೈನಲ್‌ ಹಣಾಹಣಿ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಫೆಡರರ್‌ ಮಣಿಸಿದ ನಡಾಲ್‌ ಫೈನಲ್‌ ಪ್ರವೇಶ

Published:
Updated:

ಪ್ಯಾರಿಸ್: ಟೆನಿಸ್ ದಂತಕತೆ ರೋಜರ್‌ ಫೆಡರರ್‌ ಅವರಿಗೆ ಸೋಲುಣಿಸಿದ ಪರಿಣತ ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಶುಕ್ರವಾರ 12ನೇ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿದರು.

6–3, 6–4, 6–2 ಸೆಟ್‌ಗಳ ಸುಲಭದ ಜಯವನ್ನು ಅವರು ಸಂಪಾದಿಸಿದರು. ಇಡೀ ಪಂದ್ಯ 2 ಗಂಟೆ 25 ನಿಮಿಷಗಳಲ್ಲಿ ಕೊನೆಯಾಯಿತು. ಈ ಹಿಂದಿನ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಐದು ಪಂದ್ಯಗಳಲ್ಲಿ ಫೆಡರರ್‌ ಎದುರು ನಡಾಲ್‌ ಸೋಲು ಕಂಡಿಲ್ಲ. 

ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅಮಂಡಾ ಅನಿಸಿಮೊವಾ ಸವಾಲನ್ನು ಮೀರಿದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು. ಶುಕ್ರವಾರ ನಡೆದ ಪಂದ್ಯದಲ್ಲಿ 6–7 (4), 6–3, 6–3 ಸೆಟ್‌ಗಳಿಂದ ಬಾರ್ಟಿ ಗೆದ್ದರು.

ಎಂಟನೇ ಶ್ರೇಯಾಂಕದ ಬಾರ್ಟಿ ಅವರು ಸ್ಯಾಮ್‌ ಸ್ಟೋಸರ್‌ ನಂತರ ಫ್ರೆಂಚ್‌ ಓಪನ್ ಟೂರ್ನಿಯ ಫೈನಲ್‌ ತಲುಪಿದ ಮೊದಲ ಆಟಗಾರ್ತಿಯಾಗಿದ್ದಾರೆ. 2010ರಲ್ಲಿ ಸ್ಟೋಸರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಮರ್ಕೆಟಾ ವೊಂಡ್ರೊಸೊವಾ ಅವರನ್ನು ಬಾರ್ಟಿ ಎದುರಿಸಲಿದ್ದಾರೆ.


ಆ್ಯಶ್ಲೆ ಬಾರ್ಟಿ

ಇನ್ನೊಂದೆಡೆ ಶ್ರೇಯಾಂಕರಹಿತ ಆಟಗಾರ್ತಿ ಮರ್ಕೆಟಾ ವೊಂಡ್ರೊಸೊವಾ ಅವರು ಜೊಹಾನ್ನಾ ಕೊಂತಾ ಎದುರು 7–5, 7–6 (2) ಸೆಟ್‌ಗಳಿಂದ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಕೊಂತಾ ಈ ಪಂದ್ಯದಲ್ಲಿ ಗೆದ್ದಿದ್ದರೆ 1977ರ ಬಳಿಕ ಗ್ರ್ಯಾನ್‌ಸ್ಲಾಮ್‌ವೊಂದರ ಫೈನಲ್ ತಲುಪಿದ ಮೊದಲ ಬ್ರಿಟಿಷ್‌ ಆಟಗಾರ್ತಿ ಎನಿಸಿಕೊಳ್ಳುತ್ತಿದ್ದರು. 

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು 7–5, 6–2, 6–2 ಸೆಟ್‌ಗಳಿಂದ ಮಣಿಸಿದ್ದ ನೊವಾಕ್‌ ಜೊಕೊವಿಚ್‌ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಒಂಬತ್ತನೆ ಬಾರಿ ಸೆಮಿಫೈನಲ್‌ ತಲುಪಿದ ಸಾಧನೆಗೆ ಅವರು ಪಾತ್ರರಾದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ‌ಅವರು ಡೊಮಿನಿಕ್‌  ಥೀಮ್‌ ಅವರನ್ನು ಎದುರಿಸಲಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !