ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ‘ಟೈ’ ಗೆ ಭಾರತ ಸಿದ್ದತೆ

Published 22 ಜನವರಿ 2024, 18:44 IST
Last Updated 22 ಜನವರಿ 2024, 18:44 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನ ವಿರುದ್ಧ ಮುಂಬರುವ ಗ್ರಾಸ್ ಕೋರ್ಟ್ ಟೈಗಾಗಿ ತನ್ನ ಪೂರ್ವಸಿದ್ಧತಾ ಶಿಬಿರವನ್ನು ಪ್ರಾರಂಭಿಸಿದೆ. ಅಗ್ರ ಕ್ರಮಾಂಕದ ಆಟಗಾರ ಸುಮಿತ್ ನಗಾಲ್ ಅವರ ಅನುಪಸ್ಥಿತಿಯಲ್ಲಿ ಎರಡನೇ ಸಿಂಗಲ್ಸ್ ಆಟಗಾರನಿಗೆ ಹುಡುಕಾಟ ಆರಂಭಿಸಿದೆ.

ದೇಶದ ಅಗ್ರ ಸಿಂಗಲ್ಸ್ ಆಟಗಾರರಾದ ನಗಾಲ್ (137ನೇ ಕ್ರಮಾಂಕ)  ಮತ್ತು ಶಶಿಕುಮಾರ್ ಮುಕುಂದ್ (463ನೇ ಕ್ರಮಾಂಕ) ಫೆ.3-4ರಂದು ಇಸ್ಲಾಮಾಬಾದ್ ನಲ್ಲಿ ನಡೆದ ಟೈ ನಿಂದ ಹಿಂದೆ ಸರಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಾಮ್ ಕುಮಾರ್ ರಾಮನಾಥನ್ ತಂಡದಲ್ಲಿ ಏಕೈಕ ಸಿಂಗಲ್ಸ್ ಆಟಗಾರರಾಗಿದ್ದಾರೆ.

ನಾಯಕ ರೋಹಿತ್ ರಾಜ್‌ಪಾಲ್‌ ಎರಡನೇ ಸಿಂಗಲ್ಸ್ ಆಡಲು ಯೂಕಿ ಬಾಂಬ್ರಿ ಮತ್ತು ಎನ್. ಶ್ರೀರಾಮ್ ಬಾಲಾಜಿ ನಡುವೆ ಆಯ್ಕೆ ಮಾಡಬೇಕಾಗಿದೆ. 

ಎಟಿಪಿ ಡಬಲ್ಸ್ ಪಟ್ಟಿಯಲ್ಲಿ 61ನೇ ಸ್ಥಾನದಲ್ಲಿರುವ ಬಾಂಬ್ರಿ ತಂಡದ ಅತ್ಯುನ್ನತ ಕ್ರಮಾಂಕಿತ ಆಟಗಾರನಾಗಿದ್ದು, ಡಬಲ್ಸ್ ರಬ್ಬರ್ ನಲ್ಲೂ ಆಡಲಿದ್ದಾರೆ. ಭಾರತದ ಅತ್ಯುತ್ತಮ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಡೇವಿಸ್ ಕಪ್ ನಿಂದ ನಿವೃತ್ತರಾಗಿದ್ದಾರೆ.

ನಿಕಿ ಪೂಣಚ್ಚ ಕೂಡ ಆಯ್ಕೆಗೆ ಪರಿಗಣಿಸಬಹುದು. ಆದರೆ ಅವರು 783ನೇ ಸ್ಥಾನದಲ್ಲಿದ್ದಾರೆ ಮತ್ತು ತಂಡವು ಅವರನ್ನು ಸಿಂಗಲ್ಸ್‌ನಲ್ಲಿ ಕಣಕ್ಕಿಳಿಸುವುದಿಲ್ಲ.

ರಾಮ್ ಕುಮಾರ್, ಪೂಣಚ್ಚ ಮತ್ತು ಸಾಕೇತ್ ಮೈನೇನಿ ಎರಡೂವರೆ ಗಂಟೆಗಳ ಕಾಲ ಅಭ್ಯಾಸ ನಡೆಸಿದರು.  

‘ಎರಡನೇ ಸಿಂಗಲ್ಸ್ ಆಟಗಾರರ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವರು ಹುಲ್ಲಿನ ಮೇಲೆ ಹೇಗೆ ಆಡುತ್ತಾರೆ ಎಂಬುದನ್ನು ನೋಡಬೇಕಾಗಿದೆ’ ಎಂದು ರಾಜಪಾಲ್ ತಿಳಿಸಿದರು. 

‘ಪಾಕಿಸ್ತಾನವು ಹುಲ್ಲಿನ ಮೇಲೆ ಉತ್ತಮ ತಂಡಗಳನ್ನು ಸೋಲಿಸಿದೆ‌. ಆದ್ದರಿಂದ ನಾವು ಉತ್ತಮವಾಗಿ ತಯಾರಿ ನಡೆಸಬೇಕು ಮತ್ತು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು. ಹುಲ್ಲಿನ ಮೇಲೆ ಹೇಗೆ ಒತ್ತಡ ಹೇರಬೇಕು, ಹೇಗೆ ಒಳಗೆ ಬರಬೇಕು (ಚಾರ್ಜ್ ನೆಟ್) ಎಂದು ಅವರಿಗೆ ತಿಳಿದಿದೆ. ನಾವು ಅದಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕೆ ಅನುಗುಣವಾಗಿ ನಾವು ನಮ್ಮ ಸಿದ್ಧತೆಗಳನ್ನು ಯೋಜಿಸುತ್ತಿದ್ದೇವೆ, ಅದರ ಆಧಾರದ ಮೇಲೆ ಸಾಕಷ್ಟು ಅಭ್ಯಾಸಗಳು ನಡೆಯುತ್ತಿವೆ’ ಎಂದು ಹೇಳಿದರು.  

ಚೆಂಡುಗಳು ಹುಲ್ಲಿನ ಮೇಲೆ ಕೆಳಮಟ್ಟದಲ್ಲಿ ಉಳಿಯುತ್ತವೆ ಮತ್ತು ಅಂಗಣಗಳು ತ್ವರಿತ ಮತ್ತು ಅನಿರೀಕ್ಷಿತವಾಗಿರುತ್ತವೆ. ಚೆಂಡು ಎಲ್ಲಿ ಬರುತ್ತದೆ ಮತ್ತು ಚೆಂಡು ಎಷ್ಟು ಬೌನ್ಸ್ ಆಗುತ್ತದೆ ಎಂದು ಊಹಿಸುವುದು ಕಷ್ಟ ಎಂದು ಕೋಚ್ ಜೀಶನ್ ಅಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT