ಮಂಗಳವಾರ, ಅಕ್ಟೋಬರ್ 4, 2022
27 °C
ಚೆನ್ನೈ ಓಪನ್ ಟೆನಿಸ್‌ ಟೂರ್ನಿ: ಕ್ಲೊಯ್‌ ಪಕೆಟ್‌ಗೆ ಆಘಾತ

ಎರಡನೇ ಸುತ್ತಿಗೆ ಕರ್ಮನ್‌ ಕೌರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಎಂಟನೇ ಶ್ರೇಯಾಂಕದ ಕ್ಲೊಯ್ ಪಕೆಟ್‌ ಅವರಿಗೆ ಆಘಾತ ನೀಡಿದ ಭಾರತದ ಕರ್ಮನ್‌ ಕೌರ್ ಥಂಡಿ, ಚೆನ್ನೈ ಓಪನ್‌ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಕಾಲಿಟ್ಟರು.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋಮವಾರ ಕರ್ಮನ್‌ 4-6 6-4 6-3ರಿಂದ ಫ್ರಾನ್ಸ್‌ನ ಕ್ಲೊಯ್ ಅವರನ್ನು ಮಣಿಸಿದರು. ಇದರೊಂದಿಗೆ ತಮ್ಮ ವೃತ್ತಿಜೀವನದ ಶ್ರೇಷ್ಠ ಗೆಲುವು ದಾಖಲಿಸಿದರು.

ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊದಲ ಸೆಟ್‌ ಕೈಚೆಲ್ಲಿದ ಬಳಿಕ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ವೇಗದ ಸರ್ವ್‌ಗಳನ್ನು ಪ್ರಯೋಗಿಸುವ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ 109ನೇ ಸ್ಥಾನದಲ್ಲಿರುವ ಆಟಗಾರ್ತಿಯನ್ನು ಕಂಗೆಡಿಸಿದರು.

ಮೂರನೇ ಸೆಟ್‌ನಲ್ಲಿ ಮತ್ತಷ್ಟು ಚುರುಕಿನ ಆಟದ ಮೂಲಕ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.

‘ಇದು ಖಂಡಿತವಾಗಿಯೂ ದೊಡ್ಡ ಜಯ. ಮೊದಲ ಸೆಟ್‌ ಸೋತರೂ ಪುಟಿದೇಳುವ ವಿಶ್ವಾಸ ಇತ್ತು. ತವರಿನ ಅಭಿಮಾನಿಗಳ ಬೆಂಬಲವೂ ಬಹಳಷ್ಟಿತ್ತು‘ ಎಂದು ಪಂದ್ಯದ ಬಳಿಕ ಕರ್ಮನ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು