ಭಾನುವಾರ, ಅಕ್ಟೋಬರ್ 24, 2021
23 °C

ಸಾನಿಯಾಗೆ ಒಸ್ಟ್ರಾವ ಟೂರ್ನಿ ಕಿರೀಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಒಸ್ಟ್ರಾವ, ಜೆಕ್‌ ಗಣರಾಜ್ಯ : ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಒಸ್ಟ್ರಾವ ಓಪನ್ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಚೀನಾದ ಶುಯಿ ಜಾಂಗ್‌ ಜೊತೆಗೂಡಿದ ಅವರು ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಕೈಟ್ಲಿನ್ ಕ್ರಿಸ್ಟಿಯನ್ ಮತ್ತು ಎರಿನ್‌ ರೌಟ್‌ಲಿಫ್‌ ಅವರನ್ನು ಸೋಲಿಸಿದರು.

ಸಾನಿಯಾ ಅವರಿಗೆ ಈ ವರ್ಷದಲ್ಲಿ ಒಲಿದ ಮೊದಲ ಪ್ರಶಸ್ತಿ ಇದು.

ಒಂದು ತಾಸು ನಾಲ್ಕು ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ– ಚೀನಾ ಜೋಡಿಯು 6-3, 6-2ರಿಂದ ಅಮೆರಿಕದ ಕೈಟ್ಲಿನ್‌ ಮತ್ತು ನ್ಯೂಜಿಲೆಂಡ್‌ನ ಎರಿನ್ ಎದುರು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು