ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಪತಿ ವಿರುದ್ಧ ಕಿಡಿಕಾರಿದ ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್ ಕಂಪನಿ

Last Updated 5 ಅಕ್ಟೋಬರ್ 2018, 15:50 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಹಿರಿಯ ಟೆನಿಸ್‌ ಆಟಗಾರ ಮಹೇಶ್‌ ಭೂಪತಿ, ತನಗೆ ನೀಡಬೇಕಿರುವ ವೇತನವನ್ನು ಇನ್ನೂ ಪಾವತಿಸಿಲ್ಲ ಎಂದು ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್‌ ಕಂಪನಿ ಶುಕ್ರವಾರ ಆರೋಪಿಸಿದೆ.

ಭೂಪತಿ ಅವರು 2014ರಲ್ಲಿ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಟೆನಿಸ್‌ ಲೀಗ್‌ (ಐಪಿಟಿಎಲ್‌) ಆರಂಭಿಸಿದ್ದರು. ಇದರಲ್ಲಿ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌ ಮತ್ತು ಸೆರೆನಾ ವಿಲಿಯಮ್ಸ್‌ ಸೇರಿದಂತೆ ಅನೇಕರು ಆಡಿದ್ದರು. ಹಣಕಾಸಿನ ತೊಂದರೆಯಿಂದಾಗಿ 2016ರಲ್ಲಿ ಈ ಲೀಗ್‌ ಅನ್ನು ನಿಲ್ಲಿಸಲಾಗಿತ್ತು. ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್‌, ಲೀಗ್‌ನ ಪಂದ್ಯಗಳನ್ನು ನೇರ ಪ್ರಸಾರ ಮಾಡಿತ್ತು.

‘ಲೀಗ್‌, ಸ್ಥಗಿತಗೊಂಡು 22 ತಿಂಗಳುಗಳಾಗಿವೆ. ಹೀಗಿದ್ದರೂ ಪ್ರೊಡಕ್ಷನ್ ವಿಭಾಗದ ಸಿಬ್ಬಂದಿ, ಅಂಗಳದ ಅಂಪೈರ್‌ಗಳು ಮತ್ತು ಇತರ ವಿಭಾಗಗಳಲ್ಲಿ ಕೆಲಸ ಮಾಡಿದವರಿಗೆ ಇನ್ನೂ ವೇತನ ನೀಡಿಲ್ಲ’ ಎಂದು ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಲೆಜೆಂಡರಿ ಗ್ರೂಪ್‌ ಎಂಬ ಕಂಪನಿಯ ವಂಚನೆಯಿಂದಾಗಿ ಐಪಿಟಿಎಲ್‌ ನಿಲ್ಲಿಸಬೇಕಾಯಿತು. ಈಗ ತಲೆದೋರಿರುವ ಸಮಸ್ಯೆಗೆ ಆ ಕಂಪನಿಯೇ ನೇರ ಹೊಣೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಲೆಜೆಂಡರಿ ಗ್ರೂಪ್‌ ಸುಮಾರು ₹3.70 ಕೋಟಿ ಬಾಕಿ ಉಳಿಸಿಕೊಂಡಿದೆ. ಲೀಗ್‌ನಲ್ಲಿ ಆಡಿದ ಕೆಲ ಆಟಗಾರರಿಗೂ ವೇತನ ನೀಡಿಲ್ಲ. ಇದು ನಿಜಕ್ಕೂ ನೋವಿನ ವಿಚಾರ. ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕೊಡುವ ವ್ಯವಸ್ಥೆ ಮಾಡುತ್ತೇನೆ. ಇದಕ್ಕೆ ಸ್ವಲ್ಪ ಸಮಯ ಬೇಕು’ ಎಂದು ಭೂಪತಿ ತಿಳಿಸಿದ್ದಾರೆ.

ಐಪಿಟಿಎಲ್‌ನಲ್ಲಿ ಆಡಿದ್ದಕ್ಕಾಗಿ ಸಿಗಬೇಕಾಗಿದ್ದ ಸಂಭಾವನೆ ಇನ್ನೂ ಕೈಸೇರಿಲ್ಲ ಎಂದು ಕ್ರೊವೇಷ್ಯಾದ ಆಟಗಾರ ಮರಿನ್‌ ಸಿಲಿಕ್‌ ಇತ್ತೀಚೆಗೆ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT