ಸೋಮವಾರ, ಸೆಪ್ಟೆಂಬರ್ 16, 2019
22 °C

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಸೆಮಿಗೆ ಜೊಕೊವಿಚ್‌ ಲಗ್ಗೆ

Published:
Updated:
Prajavani

ಮ್ಯಾಡ್ರಿಡ್‌: ವಿಶ್ವ ರ‍್ಯಾಂಕಿಂಗ್‌ನ ಒಂದನೇ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರ ವಾರ ಕ್ವಾರ್ಟರ್‌ಫೈನಲ್‌ನಲ್ಲಿ ಅವರ ವಿರುದ್ಧ ಆಡಬೇಕಾಗಿದ್ದ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ವಿಷಾಹಾರ ಸೇವನೆ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಆಡಲಿಲ್ಲ. ಹೀಗಾಗಿ ಜೊಕೊವಿಚ್ ಹಾದಿ ಸುಗಮವಾಯಿತು.

2011 ಹಾಗೂ 2016ರಲ್ಲಿ ಚಾಂಪಿಯನ್‌ ಆಗಿದ್ದ ಜೊಕೊವಿಚ್‌ ಈ ಬಾರಿ ಎರಡು ಹಾಗೂ ಮೂರನೇ ಸುತ್ತಿನ ಪಂದ್ಯಗಳಲ್ಲಿ ಕ್ರಮವಾಗಿ ಟೇಲರ್‌ ಫ್ರಿಟ್ಜ್‌ ಹಾಗೂ ಜೆರೆಮಿ ಚಾರ್ಡಿ ಅವರನ್ನು ಸೋಲಿಸಿದ್ದರು.‌

ಫೈನಲ್‌ಗೆ ಹಲೆಪ್‌: ಸಿಮೊನಾ ಹೆಲೆಪ್‌ ಟೂರ್ನಿಯ ಫೈನಲ್‌ ತಲುಪಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್‌ ಹಣಾ ಹಣಿಯಲ್ಲಿ ಅವರು ಬೆಲಿಂಡಾ ಬೆನ್ಸಿಕ್‌ ಅವರನ್ನು 6–2, 7–6(2), 6–0 ಸೆಟ್‌ಗಳಿಂದ ಸೋಲಿಸಿದರು.

ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಹಲೆಪ್‌ ಜಯಿಸಿದರೆ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

Post Comments (+)